
ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷ ವಸಂತ ಮಜಲು ಧ್ವಜಾರೋಹಣ ಮಾಡಿದರು. ಸಂಘದ ಉಪಾಧ್ಯಕ್ಷ ರಾಜಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಹರಿದಾಸ ಪಡಂತ್ತಾಯ, ಶೇಖರ ನಾಯ್ಕ, ಗೋಪಾಲ ನಾಯ್ಕ್, ಕೇಶವ ಪೂಜಾರಿ, ಬಾಲಕೃಷ್ಣ ಗೌಡ ಬಿ., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕವಿತಾ ಶೆಟ್ಟಿ, ನಿವೃತ್ತ ನಿರ್ವಾಹಣಾಧಿಕಾರಿ ಸತ್ಯ ಶಂಕರ ಭಟ್, ಗೇರುಕಟ್ಟೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ವೈ., ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.