ಗೇರುಕಟ್ಟೆ: ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘ ದಿಂದ ಸ್ವಾತಂತ್ರ್ಯ ದಿನಾಚರಣೆ

0

ಗೇರುಕಟ್ಟೆ: ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ 25ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು.

ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕೆ. ಧ್ವಜಾರೋಹಣ ಮಾಡಿದರು.

ಸಂಘದ 25ನೇ ವರ್ಷ ಪೂರೈಸಿದ ನೆನಪಿಗಾಗಿ ಗೇರುಕಟ್ಟೆ ಕೊರಂಜ ಸ.ಉ.ಹಿ.ಪ್ರಾ.ಶಾಲೆ ಹಾಗೂ ಗೇರುಕಟ್ಟೆ ಸರಕಾರಿ ಸಂಯುಕ್ತ ಫ್ರೌ. ಶಾಲೆಗಳಿಗೆ ಆಫೀಸ್ ಟೇಬಲ್ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಿದರು. ಸ್ಥಳೀಯ ಉದ್ಯಮಿ ಮನ್ಸೂರ್ ಗೇರುಕಟ್ಟೆ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಸಂದರ್ಭೋಚಿತವಾಗಿ ಮಾತನಾಡಿದರು. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ, ಯಶೋಧರ ಶೆಟ್ಟಿ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಶರತ್ ಕುಮಾರ್ ಕೆ., ಗೇರುಕಟ್ಟೆ ಪ್ರೌಢ ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಗೋಪಾಲ ಗೌಡ ಯಂ.ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ನಾಸಿರ್, ಕಾರ್ಯದರ್ಶಿ ಮೈಕೆಲ್ ಮೊಂತೇರೊ, ಜತೆ ಕಾರ್ಯದರ್ಶಿ ವಿನಯ್, ಕೋಶಾಧಿಕಾರಿ ತಾರಾನಾಥ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಧ್ವಜರೋಹಣ ಸಂದರ್ಭದಲ್ಲಿ ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೇರುಕಟ್ಟೆ ಸಂಯುಕ್ತ ಫ್ರೌ. ಶಾಲೆ ಹಾಗೂ ಮನ್ಶ್ಯರ್ ಶಾಲಾ ಮಕ್ಕಳು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಪೋಷಕರು ಉಪಸ್ಥಿತರಿದ್ದರು.

ಅಂಚೆ ಇಲಾಖೆ ನಿವೃತ್ತ ಡಾಕಯ್ಯ ಗೌಡ ಹೆಚ್. ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪದ್ಮನಾಭ ಸ್ವಾಗತಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here