
ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನೆರವೇರಿತು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದಯಾಳ್ ಭಾಗ್ ಧರ್ಮಪ್ರಾಂತ್ಯದ ಫಾ.ಲ್ಯಾನ್ಸಿ ರೆಬೆಲ್ಲೊ ಹಾಗೂ ಶಾಲಾ ಸಂಚಾಲಕರು ಹಾಗೂ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದಯಾಳ್ ಭಾಗ್ ಧರ್ಮಪ್ರಾಂತ್ಯದ ಫಾ.ಲ್ಯಾನ್ಸಿ ರೆಬೆಲ್ಲೊ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಕೊಡುಗೆಯಾಗಿ ನೀಡಿದ ಸ್ವಾತಂತ್ಯವನ್ನು ನಾವು ಕಾಪಾಡಿಕೊಂಡು ಹೋಗಬೇಕು ಎಂದರು. ಶಾಲಾ ಸಂಚಾಲಕ ಫಾ. ಎಲಿಯಸ್ ಡಿಸೋಜಾ, ಸ್ವಾತಂತ್ರ್ಯ ದಿನದ ಶುಭ ಹಾರೈಸಿದರು.10ನೇ ತರಗತಿ ವಿದ್ಯಾರ್ಥಿನಿ ಜೆನಿಫರ್ ಸ್ವಾತಂತ್ಯ ದಿನಾಚರಣೆ ಕುರಿತು ಭಾಷಣ ನೀಡಿದರು.
ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಲಿಯೋ ಪಿರೇರಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್, ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜಾರವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಪೋನ್ಸಾ ಸ್ವಾಗತಿಸಿದರು. 10ನೇ ತರಗತಿ ವಿದ್ಯಾರ್ಥಿನಿ ದೀಪ ಅವರು ನಿರೂಪಿಸಿದರು. ಹರ್ಷಿತಾ ವಂದಿಸಿದರು.