
ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಡಾ|ಸ್ಟ್ಯಾನಿ ಗೋವಿಯಸ್ ಧ್ವಜಾರೋಹಣ ನೆರವೇರಿಸಿದರು. ಮಹಾನ್ ನಾಯಕರ ಅಹಿಂಸಾತ್ಮಕ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಸಫಲವಾಯಿತು. ಸ್ವಾತಂತ್ರ್ಯ ಹೋರಾಟಗಾರರನ್ನು ಎಂದಿಗೂ ಮರೆಯಬಾರದು. ವರ್ತಮಾನ ಕಾಲಘಟ್ಟದಲ್ಲಿ ಭಾರತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.ಭವಿಷತ್ ನಲ್ಲಿ ಗಾಂಧೀಜಿಯ ಕನಸನ್ನು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದಾಗಿದೆ. ಭಾರತ ಪ್ರದೇಶ ಮಾತ್ರವಲ್ಲ ಅದೊಂದು ಜನ ಸಮುದಾಯ. ರಾಷ್ಟ್ರ ನಮಗೆ ಏನನ್ನು ಕೊಡುತ್ತದೆ ಇದು ಮುಖ್ಯವಲ್ಲ ನಾವು ರಾಷ್ಟ್ರಕ್ಕಾಗಿ ನಾವು ಯಾವ ಕೊಡುಗೆಯನ್ನು ನೀಡುತ್ತೇವೆ ಇದು ಬಹಳ ಮುಖ್ಯ. ರಾಷ್ಟ್ರ ಅಭಿವೃದ್ಧಿಯ ಕಾರ್ಯದಲ್ಲಿ ಸರ್ವರು ಕೈಜೋಡಿಸೋಣ ಎಂದು ಅವರು ತಮ್ಮ ಸಂದೇಶವನ್ನು ನೀಡಿದರು.
ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹಾಯ ಧರ್ಮಗುರು ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ನಿವೃತ್ತ ಪ್ಯಾರಾ ಕಮಾಂಡೋ ಹವಾಲ್ದಾರ್ ಸತೀಶ್ ಸುವರ್ಣ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ದೀಪಕ್ ಡೇಸಾ, ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್, ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಾಂತಿ ಮೇರಿ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್.ಸಿ.ಸಿ, ಕಬ್ಸ್, ಸ್ಕೌಟ್ಸ್ , ಬುಲ್ ಬುಲ್ಸ್, ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ವಿದ್ಯಾರ್ಥಿ ಸಾನ್ವಿತಾ ಎಂ.ಎಸ್. ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ ಸ್ವಾಗತಿಸಿದರು. ಉಪನ್ಯಾಸಕ ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಾರ್ಡಿಯನ್ ಏಂಜಲ್ಸ್ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಹೆಲೆನ್ ಮೋನಿಕಾ ಲೋಬೊ ವಂದಿಸಿದರು.