
ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಎರ್ನೋಡಿ ಉಜಿರೆ ಮತ್ತು ಮೊಗೇರ ಸಮಾಜ ಸೇವಾ ಸಮಿತಿ, ಎರ್ನೋಡಿ ಉಜಿರೆ ಇದರ ವತಿಯಿಂದ 79ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಕ್ಷೇತ್ರದ ಟ್ರಸ್ಟಿ ಕೆ.ಜಯಂತ ಶೆಟ್ಟಿ ಕುಂಟಿನಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಯು. ಬಾಬು ಮೊಗೇರ ಎರ್ನೋಡಿ, ಟ್ರಸ್ಟಿಗಳಾದ ನೋಣಯ್ಯ ಪುಂಜಾಲಕಟ್ಟೆ, ಕೆ. ಸಂಜೀವ ಶೆಟ್ಟಿ ಕುಂಟಿನಿ, ವಿಶ್ವನಾಥ ಶೆಟ್ಟಿ ರಸರಾಗ, ತನಿಯಪ್ಪ ಅರಿಪ್ಪಾಡಿ ಬಿ.ಕೆ.ಗೋವಿಂದ ಮುಂಡಾಜೆ, ಗಣೇಶ ಪಾರ, ದಿಲೀಪ್ ಎರ್ನೋಡಿ, ದೀಕ್ಷಿತ್ ಎರ್ನೋಡಿ, ಪ್ರದೀಪ್ ಎರ್ನೋಡಿ, ರಾಜೇಶ್ ಜೋಗಿ ಕಾಶಿಬೆಟ್ಟು ಉಪಸ್ಥಿತರಿದ್ದರು.