
ಬಳ್ಳಮಂಜ: ಶ್ರೀ ವಿದ್ಯಾ ಸಾಗರ ಸಿ.ಬಿ.ಎಸ್.ಸಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಸದ್ಗುರು ಟ್ರೇಡರ್ಸ್ ನ ಮಾಲಕ ಶಶಿಧರ ರೈ ಶೈಲಾ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಯತೀಕ್ಷಾ ಸ್ವಾಗತಿಸಿದರು. ಪ್ರಾಂಶುಪಾಲೆ ಡಾ.ವರ್ಷ ರೆಡ್ಡಿ ಎಸ್.ವಿ. ವಂದಿಸಿದರು.