
ಬೆಳ್ತಂಗಡಿ : ಫ್ರೆಂಡ್ಸ್ ಸುದೆಮುಗೇರು ತಂಡದ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಟ್ರೋಫಿ-2025 ಕ್ರಿಕೆಟ್ ಪಂದ್ಯಾಕೂಟವು ಕೆಇಬಿ ರಸ್ತೆಯಲ್ಲಿರುವ ಬೊಟ್ಟುಗುಡ್ಡೆ ಮೈದಾನದಲ್ಲಿ ಆ.10ರಂದು ನಡೆಯಿತು.

ಮಳೆಗಾಲದ ಮಳೆಯನ್ನು ಲೆಕ್ಕಿಸದೆ ಒಟ್ಟು 12 ತಂಡದ 100ಕ್ಕೂ ಅಧಿಕ ಆಟಗಾರರು ಪಂದ್ಯಕೂಟದಲ್ಲಿ ಭಾಗವಹಿಸಿದ್ದು, ಪಂದ್ಯಾಕೂಟದ ಚಾಂಪಿಯನ್ ಪಟ್ಟವನ್ನು ಸುದೆಮುಗೇರು ತಂಡ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕರುಣಾಕರ ಬಂಗೇರ ಮಾಲಕತ್ವದ ಜನಪ್ರಿಯ ಅಟ್ಯಾಕರ್ಸ್ ಬೊಟ್ಟುಗುಡ್ಡೆ ತಂಡವು ಪಡೆದುಕೊಂಡಿತು.
ಪಂದ್ಯಕೂಟದ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಫ್ರೆಂಡ್ಸ್ ಸುದೆಮುಗೇರು ತಂಡದ ಗಣೇಶ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕರುಣಾಕರ ಬಂಗೇರ ಹಾಗೂ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯನ್ನು ಸುದೆಮುಗೇರು ತಂಡದ ಭೀಮ ರವರು ಪಡೆದುಕೊಂಡರು.
ಗುರುವಾಯನಕೆರೆಯ ಪಪ್ಪು ಮೊಬೈಲ್ಸ್ ಮಾಲಕ ಮಹಮ್ಮದ್ ಶರೀಫ್ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.