ಭಾರತೀಯ ಜೈನ್ ಮಿಲನ್ ನಾರಾವಿ- ವಿಶೇಷ ಆಟಿದ ಕೂಟ ಮತ್ತು ಆಹಾರೋತ್ಸವ

0

ಬೆಳ್ತಂಗಡಿ: ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ಆ.3ರಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ವಿಶೇಷ ಆಟಿದ ಕೂಟ, ಆಹಾರೋತ್ಸವ ಮತ್ತು ಸಾಧಕರಿಗೆ ಗೌರವಾರ್ಪಣಾ ಕಾರ್ಯಕ್ರಮ ನಡೆಯಿತು.

ಮೂಡಬಿದ್ರಿ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಡಾ.ಪ್ರಭಾತ್ ಕುಮಾರ್ ಬಲ್ನಾಡ್ ಆಟಿದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ವೈಶಿಷ್ಟ್ಯತೆ ಮತ್ತು ಆಚರಣೆಗಳ ಮಹತ್ವದ ಜೊತೆ ವಿಶೇಷ ಧಾರ್ಮಿಕ ಉಪನ್ಯಾಸವನ್ನು ನೀಡಿದರು.

ಈ ಸಭೆಯಲ್ಲಿ ಭಾರತೀಯ ಜೈನ್ ಮಿಲನಿನ ಪರಮ ಸಂರಕ್ಷಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಗೌರವಾನ್ವಿತ ಡಾ|ಡಿ.ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಆಗುತ್ತಿರುವ ಉಪಸರ್ಗ ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ದೊರೆಯಲೆಂದು ಸಾಮೂಹಿಕವಾಗಿ ಐದು ಸಾರಿ ಮಹಾಮಂತ್ರವನ್ನು ಪಠಿಸಲಾಯಿತು.

ಗೌರವಾರ್ಪಣಾ ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವತಿಯಿಂದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಮೂಹ ಸಂಸ್ಥೆಗಳಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿಯಿಂದ ಪುರಸ್ಕೃತಗೊಂಡಿರುವ ಗುರುವಾಯನಕೆರೆ EXCEL ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನಿತರು ಗೌರವಾರ್ಪಣೆಯನ್ನು ಸ್ವೀಕರಿಸಿ EXCEL ವಿದ್ಯಾ ಸಂಸ್ಥೆಯ ಪ್ರಗತಿ, ವಿದ್ಯಾರ್ಥಿಗಳ ಅಮೋಘ ಸಾಧನೆ ಮತ್ತು ಕಠಿಣ ಪರಿಶ್ರಮದೊಂದಿಗೆ ತಾನು ಬೆಳೆದು ಬಂದ ದಾರಿಯನ್ನು ತನ್ನ ಅಭಿನಂದನಾ ನುಡಿಯಲ್ಲಿ ಸವಿಸ್ತಾರವಾಗಿ ಪ್ರಚುರಪಡಿಸಿದರು. ಜೊತೆಗೆ ಬಜಗೋಳಿ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಮತ್ತು ಗೋಶಾಲೆಯ ನಿರ್ದೇಶಕರಾಗಿದ್ದು ನೂರಾರು ಗೋವುಗಳಿಗೆ ಹಾಗೂ ಶ್ವಾನಗಳಿಗೆ ಆಶ್ರಯ ನೀಡಿ ಪೋಷಿಸುವುದರ ಜೊತೆಗೆ ಪ್ರತೀ ತಿಂಗಳು ಸಾರ್ವಜನಿಕ ಉಚಿತ Anti Rabis ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಾ ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ವೀರಂಜಯ ಜೈನ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಹೃದಯಿ ಮಿಲನ್ ಬಂಧುಗಳ ಸಹಕಾರದೊಂದಿಗೆ ಭಾರತೀಯ ಜೈನ್ ಮಿಲನ್ ವತಿಯಿಂದ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಗೆ ಸುಮಾರು 5 ಕ್ವಿಂಟಾಲ್ ಅಕ್ಕಿಯನ್ನು ಆಹಾರದಾನವಾಗಿ ನೀಡಲಾಯಿತು.
ವಿಶೇಷ ಆಕರ್ಷಣೆಯಾಗಿ ತುಳುನಾಡ ಪರಂಪರೆಯ ಪುರಾತನ ವಸ್ತುಗಳ ಪ್ರದರ್ಶನದ ಜೊತೆಗೆ ವರ್ತಮಾನ ಕಾಲದ 24 ತೀರ್ಥಂಕರರ ವೃಕ್ಷಗಳ ಆವರಣವು ಎಲ್ಲರ ಮನಸೊರೆಗೊಂಡಿತು. ಮಿಲನ್ ಬಂಧುಗಳಿಗೆ ತುಳು ಗಾಯನ ಕೂಟ, ತುಳು ರಸಪ್ರಶ್ನೆ ಕೂಟ, ಅದೃಷ್ಟಶಾಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆಹಾರೋತ್ಸವದಲ್ಲಿ ಜೈನ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಹಾಗೂ ಆಟಿ ತಿಂಗಳ ತಿಂಡಿ ತಿನಸುಗಳ ಪ್ರದರ್ಶನ ಮತ್ತು ಸಹಭೋಜನ ಕೂಟ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಉಪಾಧ್ಯಕ್ಷ ಸುದರ್ಶನ್ ಜೈನ್, ನಿರ್ದೇಶಕ ಶ್ರೀವರ್ಮ ಅಜ್ರಿ ಭಾಗವಹಿಸದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ಅಧ್ಯಕ್ಷ ಕಿಶೋರ್ ಕುಮಾರ್ ಈದು ವಹಿಸಿದ್ದರು. ನಾರಾವಿ ಜೈನ್ ಮಿಲನ್ ನ ಕಾರ್ಯದರ್ಶಿ ಶ್ರೇಯಾಂಸ ಜೈನ್, ಕೋಶಾಧಿಕಾರಿ ಸವಿತಾ ಅಜಿತ್ ಜೈನ್ ಮತ್ತು ಜೈನ್ ಮಿಲನ್ ಬಂಧುಗಳು ಉಪಸ್ಥಿತರಿದ್ದರು.

ಭಾರತೀಯ ಜೈನ್ ಮಿಲನ್ ನಾರಾವಿಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಪಡ್ಯಾರಮನೆ ಈದು ಪ್ರಾಸ್ತಾವಿಕ ಮಾತನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಶ್ರೀ ಶಿಶುಪಾಲ್ ಜೈನ್ ಬೈರ್ನಡೆ ಗುತ್ತು ಕಾರ್ಯಕ್ರಮ ನಿರೂಪಿಸಿದರು. ನಾರಾವಿ ಜೈನ್ ಮಿಲನ್ ನ ನಿಕಟಪೂರ್ವ ಕಾರ್ಯದರ್ಶಿ ಅಭಿಜಿತ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here