
ಅಳದಂಗಡಿ: ಶಿವನಾಗ ಫ್ರೆಂಡ್ಸ್ ಕುದ್ಯಾಡಿ ಇವರ ಆಶ್ರಯದಲ್ಲಿ 2ನೇ ವರ್ಷದ ಕೆಸರ್‌ಡೊಂಜಿ ದಿನ ಮತ್ತು ಪುರುಷರ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಕ್ರೀಡಾಕೂಟವು ಆ. 10ರಂದು ಕುದ್ಯಾಡಿ ಶಿವನಾಗ ಬಳಿಯ ರತ್ನಾಕರ ಪೂಜಾರಿಯವರ ಗದ್ದೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9-30ಕ್ಕೆ ಶಾಸಕ ಹರೀಶ್ ಪೂಂಜ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಿವನಾಗ ಫ್ರೆಂಡ್ಸ್ ಅಧ್ಯಕ್ಷ ಸುಕೇಶ್ ಪೂಜಾರಿ ಇರಂತೊಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳತದಾರ ಶಿವಪ್ರಸಾದ ಅಜಿಲರು ಗೌರವ ಉಪಸ್ಥಿತಿ ಇರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಉರುವಾಲು, ವೈದ್ಯ ಡಾ. ಎಂ.ಎನ್. ತುಳುಪುಳೆ, ಉದ್ಯಮಿ ನಿತ್ಯಾನಂದ ಎನ್. ನಾವರ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಕೊಡಂಗೆ, ಸುಲ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಶುಭಕರ ಪೂಜಾರಿ, ಕುದ್ಯಾಡಿ ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ., ರತ್ನಾಕರ ಪೂಜಾರಿ ಇರಂತೊಟ್ಟು, ಉದ್ಯಮಿ ವಿಶ್ವನಾಥ ಬಂಗೇರ, ಆನಂದ ಪಿಲ್ಯ, ನಾಟಿ ವೈದ್ಯ ಬೇಬಿ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ.
ಸಂಜೆ ಸಮಾರೋಪ ಕಾರ್ಯಕ್ರಮದಅಧ್ಯಕ್ಷತೆಯನ್ನು ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುದ್ಯಾಡಿ ಬ್ರಹ್ಮಶ್ರೀ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಗಣೇಶ್ ನಾರಾಯಣ ಪಂಡಿತ್, ರವಿ ಹಾರಡ್ಡೆ, ಸುಧೀರ್ ಕುಮಾರ್, ಜಯನಂದ ಪೂಜಾರಿ ಕೊರಲ್ಲ, ನವೀನ್ ಪಾದೆಮಾರಡ್ಕ, ಶೇಖರ ಪೂಜಾರಿ ಅಲೆಕ್ಕಿ, ಪ್ರಕಾಶ್ ಜಂತಿಗೋಳಿ, ನಾರಾಯಣ ಪೂಜಾರಿ ಹಾಗೂ ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ್ ಅವರು ಭಾಗವಹಿಸಲಿದ್ದಾರೆ. ಕೆಸರುಗದ್ದೆಯಲ್ಲಿ ಆಟವಾಡಲು ಸುಲ್ಕೇರಿ ಮತ್ತು ಅಳದಂಗಡಿ ವ್ಯಾಪ್ತಿಯ ಕ್ರೀಡಾತಂಡಗಳಿಗೆ ಮಾತ್ರ ಅವಕಾಶ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.