
ಗುರುವಾಯನಕೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 25ವರ್ಷಗಳ ಕಾಲ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರು ಆಗಿರುವ ಭಗೀರಥ ಜಿ.ಯವರು ಬೆಳ್ತಂಗಡಿ ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅವರಿಗೆ ಆ. 5ರಂದು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾರಾಯಣ ರಾವ್, ಉಪಾಧ್ಯಕ್ಷ ವಡಿವೇಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಕಲಾ ಎನ್., ನಿರ್ದೇಶಕರುಗಳಾದ ಸಚಿನ್ ಕುಮಾರ್ ನೂಜೋಡಿ, ಅನಂತರಾಜ್ ಜೈನ್, ಪುರಂದರ ಶೆಟ್ಟಿ ಪಾಡ್ಯರು, ಜಯಂತಿ, ಅರುಣ್ ಕುಮಾರ್, ಮೋಹನ ನಾಯ್ಕ, ಎಸ್.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.