ಬೆಳ್ತಂಗಡಿ: ಅ.12ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೆಲ್ ಬಿ ಪರೀಕ್ಷೆಯಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಸುಹಾನ್ ತೃತೀಯ ಸ್ಥಾನವನ್ನು, 2ನೇ ತರಗತಿಯ ಆಲಿಯ ಮರಿಯಂ 7ನೇ ಸ್ಥಾನ, ಜಶ್ವಿತ್ ಪ್ರಮೋದ್ ಕುಮಾರ್ 25ನೇ ಸ್ಥಾನ, ಆರನೇ ತರಗತಿಯ ಕು.ಬ್ರಾಯನ್ ಲೋಬೊ 34ನೇ ಸ್ಥಾನ, ಕು.ಶಿಝ ಫಾತಿಮಾ 38ನೇ ಸ್ಥಾನ, ಹಾಗೂ 7ನೇ ತರಗತಿಯ ಲುಬ್ನಾ ಫಾತಿಮಾ 45ನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.