
ಬೆಳ್ತಂಗಡಿ: ತಾಲ್ಲೂಕು ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆ.5ರಂದು ಭಾರಿ ಮಳೆಯಾಗಿದ್ದು ಇದರಿಂದ ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಮನೆಗಳಿಗೆ ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳಿಗೆ ಹಾನಿಯಾಗಿರುತ್ತದೆ ಇದರ ತುರ್ತು ದುರಸ್ತಿಗೆ ಅಂದಾಜು ರೂ 5ಲಕ್ಷ ವೆಚ್ಚವಾಗಬಹುದು ಆದುದರಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರೂ 5ಲಕ್ಷ ಅನುದಾನವನ್ನು ಶಿಶಿಲ ಗ್ರಾಮಕ್ಕೆ, ಮಂಜೂರುಗೊಳಿಸ ಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೆವೆ ಎಂದು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ಪಂಚಾಯತ್ ಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಮಳೆಯಿಂದ ಹಾನಿಯಾದ ರಸ್ತೆಗಳ ವಿವರ ರಸ್ತೆಯ ಹೆಸರು ಶಿಶಿಲ – ವೈಕುಂಠಪುರ ಗಿರಿಜನ ಕಾಲೋನಿ ರಸ್ತೆ 600ಮೀ, ಬೈರಕಟ್ಟೆ-ಪೇರಿಕೆ 3ಕಿ.ಮೀ , ಶಿಶಿಲೇಶ್ವರ ದೇವಸ್ನಾನ-ಗುತ್ತು ರಸ್ತೆ 2.5 ಕಿ.ಮೀ, ಗುತ್ತು-ದೇವಸ ರಸ್ತೆ 1 ಕಿ.ಮೀ, ವೈಕುಂಠಪುರ- ಗುಡ್ಡ ತೋಟ ರಸ್ತೆ 2 ಕಿ.ಮೀ ಯಷ್ಟು ಹಾನಿಯಾಗಿದ್ದು ಜನಗಳಿಗೆ ಓಡಾಟ ಮಾಡಲು ಕಷ್ಟವಾಗುವ ಪರಿಸ್ಥಿತಿ ಎದುರಾಗಿದೆ ರಸ್ತೆ ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಪಂಚಾಯತ್ ಒತ್ತಾಯಿಸುತ್ತಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ಸುದ್ದಿನ್ಯೂಸ್ ಗೆ ತಿಳಿದ್ದಾರೆ.