
ಮಚ್ಚಿನ: ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ತುಳುನಾಡ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ 2026ರಲ್ಲಿ ಬ್ರಹ್ಮ ಕಲಶ ನಡೆಯಲಿದ್ದು, ಇದರ ಜೀರ್ಣೋದ್ಧಾರ ಕೆಲಸವು ಪ್ರಗತಿಯಲ್ಲಿದ್ದು, ದೇವಸ್ಥಾನಕ್ಕೆ ಅಲಕ್ಕೆ ಬೈಲಿನ ಕುಟುಂಬಸ್ಥರು ದಾನವಾಗಿ ನೀಡಿದ ಕೊಡಿ ಮರದ ವೃಕ್ಷ ಮುಹೂರ್ತ ನಡೆದು, ಮೇ. 2ರಂದು ಬಹಳ ವಿಜೃಂಭಣೆಯಿಂದ ಕೊಡಿ ಮರದ ಮೆರವಣಿಗೆಯು ನಡೆದಿತ್ತು.

ಈ ಕೊಡಿ ಮರದ ತೈಲಧಿವಾಸವು ಜು. 29ರಂದು ನಾಗರ ಪಂಚಮಿ ದಿನದಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ್ ತಂತ್ರಿವರೇಣ್ಯರ ನೇತೃತ್ವದಲ್ಲಿ ನೂತನ ಕೊಡಿಮರದ ತೈಲಾಧಿವಾಸ
ನೆರವೇರಿತು. ಬೆಳಿಗ್ಗೆ ಗಂಟೆ 7ರಿಂದ ನಾಗನ ಕಟ್ಟೆಯಲ್ಲಿ ತನು-ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಯಂ. ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್, ಪೂರ್ವಾಧ್ಯಕ್ಷ ಈಶ್ವರ ಭಟ್ ಮೈಲತೋಡಿ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪೂರ್ವಾಧ್ಯಕ್ಷ ವಿಠಲ ಶೆಟ್ಟಿ ಮೂಡಾಯೂರು, ಶ್ರೀ ಕ್ಷೇತ್ರ ಕೊರಿಂಜ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ, ಶ್ರೀ ಗೋಕರ್ಣಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕುದ್ರೋಳಿ ಮಂಗಳೂರು ನಿರ್ದೇಶಕ ಜಯರಾಂ ಕಾರಂದೂರು, ಕಣಚೂರು ಮೆಡಿಕಲ್ ಹಾಸ್ಪಿಟಲ್ ಮಂಗಳೂರಿನ ಡಾ. ಕಿರಣ್ ಕುಮಾರ್ ಎಮ್.ಎಸ್., ಅನಂತಾರಾಮ್ ಜೋಗಿತ್ತಾಯ, ಕೊಡಿ ಮರದ ಶಿಲ್ಪಿ ಸಜಿಪ ಬೋಳಿಯಾರ್ ಹರೀಶ್ ಆಚಾರ್ಯ, ಹಿರಿಯ ವಕೀಲರು ಬದರಿನಾಥ್ ಸಂಪಿಗೆತ್ತಾಯ, ಸುಬ್ರಮಣ್ಯ ಭಟ್, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ವಿದ್ಯಾ ಸಾಗರ ಶಾಲಾ ಸಂಚಾಲಕ ವೆಂಕಟ ರೆಡ್ಡಿ, ಬಳ್ಳಮಂಜ ಫ್ಯೂಲ್ಸ್ ಚಿತ್ತಾರಂಜನ್, ವಕೀಲರು ಸಂಘದ ಅಧ್ಯಕ್ಷ ವಸಂತ ಮರಕಡ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಅನಂತಾರಾಮ್ ಗೌಡ ಪಳ್ಳತಳ, ನಾರಾಯಣ ಶೆಟ್ಟಿ ನೆತ್ತರ, ಹೇಮಂತ್ ಶೆಟ್ಟಿ ನೆತ್ತರ, ಮೊದಲಾದವರು ಭಾಗವಹಿಸಿದ್ದರು.


ಕೊಡಿಮರಕ್ಕೆ ಶುದ್ದ ಎಳ್ಳೆಣ್ಣೆಯನ್ನು ಒಂದು ಲೀಟರಿಗೆ ರೂ. 500ರಂತೆ ದೇವಸ್ಥಾನದಿಂದಲೇ ತೈಲವನ್ನು ಕೊಡಿಮರಕ್ಕೆ ಭಕ್ತರು ಸಮರ್ಪಿಸಿದರು. ಮಧ್ಯಾಹ್ನ 12ರಿಂದ ಮಹಾಪೂಜೆ, ಶ್ರೀಮತಿ ಮತ್ತು ಶ್ರೀ ವಿಶ್ವನಾಥ ಹೊಳ್ಳ ಮತ್ತು ಮಕ್ಕಳು ಹಾಗೂ ಸಹೋದರ, ಮಚ್ಚೇನಿಬೈಲು, ಬಳಂಜ ಇವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಲಿದೆ.