
ಧರ್ಮಸ್ಥಳ: ಈಗಾಗಲೇ ಕ್ರೈಮ್ ಲೈನ್ ಎಳೆದಿರುವ ಸ್ಥಳಗಳಲ್ಲಿ ಮ್ಯಾಜಿಸ್ಟ್ರೇಟ್ ಎಸಿ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ನಿರ್ಧಿಷ್ಟ ಸ್ಥಳದಲ್ಲಿ ಹೊರಗಿನವರಿಗೆ ಕಾಣದಂತೆ ತೆರೆ, ಪರದೆ ಅಥವಾ ಕರ್ಟನ್ ಅಳವಡಿಸಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಒಳಭಾಗದಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ FSL, SOCO, ಪಂಚರು, SIT ಅಧಿಕಾರಿಗಳು, ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಾಕ್ಷಿದೂರುದಾರ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಶವ ಹೂಳೆತ್ತುವ ಪಂಚಾಯತ್ ನ 12 ಕಾರ್ಮಿಕ ಸಿಬ್ಬಂದಿಯಿಂದ ಮಣ್ಣು ಅಗೆಯುವ ಕಾರ್ಯ ಆರಂಭವಾಗಿದೆ.
ಅಸ್ಥಿಪಂಜರ ಅಥವಾ ಮೃತದೇಹದ ಭಾಗ ಸಿಕ್ಕಿದರೆ ವೈದ್ಯರು ಪರಿಶೀಲನೆ ನಡೆಸಿ ಅಂಗಾಂಗ ಶೇಖರಣೆ ಮಾಡ್ತಾರೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಒಂದು ವೇಳೆ ಮುಸುಕುಧಾರಿ ವ್ಯಕ್ತಿ ತೋರಿಸಿದ ಜಾಗದಲ್ಲಿ ಯಾವುದೇ ಅವಶೇಷ ಸಿಗದೆ ಇದ್ದಲ್ಲಿ ಆ ಜಾಗವನ್ನು ಮಾರ್ಕ್ ಮಾಡಲಾಗುತ್ತದೆ.