
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹೆಣ ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್. ಐ. ಟಿಯಿಂದ ಮಹತ್ವದ ಕಾರ್ಯ ನಡೆಯಲಿದೆ. ಮುಸುಕುಧಾರಿ ಜು.29ರಂದು ಬೆಳಿಗ್ಗೆ ಬೆಳ್ತಂಗಡಿ ಎಸ್. ಐ. ಟಿ ಕಚೇರಿಗೆ ಕರೆದುಕೊಂಡು ಬಂದಿದ್ದು ಇಲ್ಲಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಅಸ್ಥಿಪಂಜರ ಹೊರ ತೆಗೆಯುವ ಪ್ರಕ್ರಿಯೆ ನಡೆಯಲಿದ್ದು ತನಿಖಾಧಿಕಾರಿ ಅನುಚೇತ್, ಪುತ್ತೂರು ಸಹಾಯಕ ಆಯುಕ್ತ ಸ್ವೆಲ್ಲಾ ವರ್ಗೀಸ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ ಇಲಾಖೆ, ಭೂ ದಾಖಲೆ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ನಿನ್ನೆ ನಡೆದ ಮಹಜರು ಸ್ಥಳಕ್ಕೆ ತೆರಳಿದ್ದಾರೆ.