
ಧರ್ಮಸ್ಥಳ: ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ವ್ಯಕ್ತಿ ಗುರುತು ಮಾಡಿದ 13 ಸ್ಥಳಗಳ ಶವಗಳ ಅವಶೇಷಗಳಿಗಾಗಿ ಎಸ್‌ಐಟಿ, ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಜು.29 ರಂದು ಸ್ಥಳಗಳ ಉತ್ಖನನ ಕಾರ್ಯ ನಡೆಯಲಿದೆ.
ಎಸ್‌ಐಟಿ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಸ್ಥಳೀಯ ಗ್ರಾಮ ಪಂಚಾಯಿತಿ ಉತ್ಪನನ ಕಾರ್ಯಕ್ಕೆ 12 ಕಾರ್ಮಿಕರನ್ನು ನಿಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ.