ಮುಂಡಾಜೆ: ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

0

ಮುಂಡಾಜೆ: ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳ, ಸಹಯೋಗದೊಂದಿಗೆ ಅ. 30ರಂದು ವಿವೇಕಾನಂದ ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆ ಮಕ್ಕಳೊಂದಿಗೆ, ಶಿಕ್ಷಣ ಸಂಸ್ಥೆಯ ಸಿಂಧೂರ ಸಭಾಂಗಣ ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಗಣೇಶ್ ಬಂಗೇರ ಅವರು ಉದ್ಘಾಟನೆ ನೆರವೇರಿಸಿದರು.

ಮಾಹಿತಿಯೊಂದಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದಕ ವಸ್ತುಗಳ ಸೇವನೆಗಳಿಂದ ದೂರ ಮಾಡುವ ಉತ್ತಮ ಸಮಾಜ ನಿರ್ಮಾಣಕ್ಕೆ, ಮಕ್ಕಳ ಅಭಿವೃದ್ದಿ ಮನ ಪರಿವರ್ತನೆಗೆ, ನೀತಿ ಬೋಧಕ ವಾಕ್ಯ ರಚನೆ ಮತ್ತು ಅರಿಯೂ ಮೂಡಿಸುವ ನಿಟ್ಟಿನಲ್ಲಿ ಬಿತ್ತಿ ಚಿತ್ರದ ಮೂಲಕ ರಚಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ವಿಮರ್ಶೆ ಬರೆದು ಜಾಗೃತಿ ಕರಪತ್ರದೊಂದಿಗೆ ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ವಿಧಿ ಸ್ವೀಕರಿಸಿ, ಕಾರ್ಯಕ್ರಮ ನಡೆಸಿ, ಮಕ್ಕಳಿಗೆ ಸ್ಫರ್ಧೆಗಳಲ್ಲಿ ಜಾಗೃತಿ ಕರಪತ್ರದೊಂದಿಗೆ ವಿಚೇತರಿಗೆ ಬಹುಮಾನ ವಿತರಣೆ ಹಾಗೂ ಅರಿವು ಮಾಹಿತಿ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶೀನಪ್ಪ ಗೌಡ, ದೈಹಿಕ ಶಿಕ್ಷಕ ಮತ್ತು ಸುರೇಶ ಅವರು ಮಕ್ಕಳಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಜಾಗೃತಿ ಮೂಡಿಸಿದರು. ವಿದ್ಯಾವರ್ಧಕ ಪ್ರೌಡ ಶಾಲೆ ಮುಖ್ಯ ಶಿಕ್ಷಕಿ ಜಯಂತಿ ಅವರು ತಮ್ಮ ಮಕ್ಕಳಿಗೆ ಅನಿಸಿಕೆ ವ್ಯಕ್ತಪಡಿಸಿದರು.

ಮುಂಡಾಜೆ ಗ್ರಾಮ ಪಂಚಾಯತ್ ಪುನರ್ ವಸತಿ ಕಾರ್ಯ ವಿಭಾಗದ ಮಜೀದ್ ಅವರು ಪ್ರಸ್ತಾವನೆಗೈದು ಮಾದಕ ದ್ರವ್ಯ ಮತ್ತು ಮಕ್ಕಳ ಮೇಲೆ ಹಾಗುವ ದುಷ್ಪರಿಣಾಮ ಕುರಿತಾದ ಅಭಿಯಾನದ ಉದ್ದೇಶದ ಬಗ್ಗೆ ವಿವರಣೆ ನೀಡಿದರು. ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳಾದ ವಿಜೇತ, ಯಶ್ಮಿತ, ಅಭಿಷೇಕ್ ಕೆ., ಭರತ್, ವಂದಿತ ಪ್ರಭು, ಸಭಾ ನಡವಳಿಗಳನ್ನು ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ವಿವೇಕಾನಂದ ವಿದ್ಯಾವರ್ಧಕ ಶಾಲಾ ಸಹ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದು, ಸಹಕರಿಸಿದರು.

ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗ ಗ್ರಾಮ ಪಂಚಾಯಿತಿ ಮುಂಡಾಜೆ ಹಾಗೂ ಯಂಗ್ ಚಾ ಲಂಗರ್ಸ್ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ವಿಶೇಷ ಸಹಕಾರ ಅಗತ್ಯ ನೆರವು ನೀಡುವ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here