
ವೇಣೂರು: ಬೃಹತ್ ಉಚಿತ ವೈದ್ಯಕೀಯ ಹೃದಯ ರೋಗ ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಜು. 27ರಂದು ನಡೆಯಿತು. ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾತಿಸಿ ಮಾತನಾಡಿ ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿಯ ಪ್ರಮುಖ ಕಾರಣವಾಗಿದೆ. ಬದಲಾದ ಜೀವನ ಶೈಲಿ ಆಹಾರದ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ ಇಂದಿನ ದಾವಂತದ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಮಯವಿಲ್ಲದಂತಾಗಿದೆ ನಾವು ಮಕ್ಕಳಿಗೆ ಶಿಕ್ಷಣ ನೀಡುವಾಗ ಬಹಳ ಯೋಚನೆ ಮಾಡುತ್ತೆವೆ ನಮ್ಮ ಅರೋಗ್ಯ ಕಡೆ ನಾವು ಯೋಚನೆ ಮಾಡುವುದ್ದಿಲ್ಲ ನಾವು ಪ್ರತಿ ನಿತ್ಯ ಸೇವಿಸುವ ಆಹಾರ ಬಗ್ಗೆ ನಮಗೆ ಸ್ವಲ್ಪವು ಕಾಳಜಿ ಇಲ್ಲ ನಮ್ಮ ಮನೆಗೆ ಬೇಕಾಗುವ ತರಕಾರಿಯನ್ನು ನಾವೇ ಬೆಳೆದು ಸೇವಿಸಿ ನಮ್ಮ ಅರೋಗ್ಯ ನಾವೇ ಕಾಪಾಡಿ ಕೊಳಬೇಕು ಎಂದರು.

ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ಮಾರದರ್ಶನದಲ್ಲಿ ಕ್ಯಾನ್ಸರ್ ತಪಾಸಣೆ ಯನ್ನು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ತಪಾಸಣೆ ನಡೆಸಲಾಯಿತು. ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು ಬಹಳ ಜನರು ರಕ್ತ ದಾನ ಭಾಗವಹಿಸಿದರು, ಸಾಮಾನ್ಯ ರೋಗ ವಿಭಾಗ ಎಲಬು ಮತ್ತು ಕಿಲುರೋಗ ವಿಭಾಗ ಕಿವಿ ಮೂಗು ಮತ್ತು ಗಂಟಲು ವಿಭಾಗ ಕ್ಯಾನ್ಸರ್ ವಿಭಾಗ, ಕಣ್ಣಿನ ವಿಭಾಗ ಹೃದಯ ವಿಭಾಗ ವಾಗಿ ವಿಂಗಡಣೆ ಮಾಡಿ ಎಲ್ಲಾ ಜನರಿಗೆ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷ ಜಗದೀಶ್ ನಾಯಕ್, ಯೋಜನೆಯ ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಅಶೋಕ್, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಸೀತಾರಾಮ್ ರೈ, ಜಗದೀಶ್ ನಾಯಕ್, ಪೂರ್ಣಚಂದ್ರ ಸೇವಾ ಪ್ರತಿಷ್ಠಾಪನ ಅಧ್ಯಕ್ಷ ಮರಳಿದರ್ ಪ್ರಭು, ಬಂಟರ ಗ್ರಾಮ ಸಮಿತಿ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಮಂಜುನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಶೆಟ್ಟಿ, ಕ್ರಿಸ್ತ ದೇವಾಲಯ ಭಾರತೀಯ ಕ್ಯಾಥೋಲಿಕ್ ಯುವಕ ಸಂಚಾಲನ ವೇಣೂರು ಘಟಕದ ಅಧ್ಯಕ್ಷರಾದ ಅರುಣ ಮತ್ತು ಜಸ್ವಿನ್ ಲೋಬೊ, ವಲಯದ ಮೇಲ್ವಿಚಾರಕಿ ಶಾಲಿನಿ, ಒಕ್ಕೂಟದ ಅಧ್ಯಕ್ಷರಾದ ವಿನ್ಸೆಂಟ್ ವಿಲಿಯಂ ರೇಗೋ, ಪ್ರವೀಣ್ ನಾಯಕ್ ರಮೇಶ್ ನಾಯಕ್, ಸೇವಾ ಪ್ರತಿನಿಧಿಯಾದ ಶೋಭಾ ಉಪಸ್ಥಿತರಿದ್ದರು.