
ಧರ್ಮಸ್ಥಳ: ಶವ ಹೂತಿಡಲಾಗಿದೆ ಎಂದು ಆರೋಪಸಲಾದ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಮಧ್ಯಾಹ್ನದ ತನಕದ ಸ್ಥಳ ಮಹಜರು ಕಾರ್ಯ ಪೂರ್ಣಗೊಳಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಸ್ನಾನಘಟ್ಟದ ತೆಂಗಿನ ತೋಟದ ಬಳಿ ಕಾಡಿನಲ್ಲಿ ಸ್ಥಳ ಮಹಜರು ಕಾರ್ಯ ನಡೆಸಿದ್ದ ಅಧಿಕಾರಿಗಳು, ನಂತರ ಸ್ನಾನಘಟ್ಟದ ಬಳಿ ಗುಡ್ಡ ಏರಿದ್ದರು. ಗುಡ್ಡದ ಮೇಲೇರಿಕೊಂಡು ನೇತ್ರವಾತಿ ಸೇತುವೆ ಬಳಿ ತನಿಖಾ ತಂಡ ಬಂದಿತ್ತು. ನೇತ್ರಾವತಿ ಮತ್ತು ಸ್ನಾನಘಟ್ಟದ ನಡುವಿನ ಗುಡ್ಡದತ್ತ ಎಸ್‌ಐಟಿ ಅಧಿಕಾರಿಗಳನ್ನು ಮುಸುಕುಧಾರಿ ವ್ಯಕ್ತಿ ಕರೆದುಕೊಂಡು ಹೋಗಿ ಅಲ್ಲಿ ಶವಗಳನ್ನು ಹೂತಿಟ್ಟ ಬಗ್ಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.