
ಬೆಳ್ತಂಗಡಿ: ಸರ್ಕಾರ ಬಂದು ಎರಡು ವರ್ಷ ಆದರೂ, ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡಬೇಕಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಮಾಡಲು ಶಾಸಕ ಹರೀಶ್ ಪೂಂಜಾ ಅವರು ಆಸಕ್ತಿ ತೊರಿಸುತ್ತಿಲ್ಲ. ಎಂದು ತಾಲೂಕು ಪಂಚಾಯತಿ ಮುಂದೆ ಜು.28ರಂದು ಕೆಡಿಪಿ ಸದಸ್ಯರು ಮತ್ತು ಬೆಳ್ತಂಗಡಿ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಜಿಲ್ಲಾ ಕೆಡಿಪಿಯಲ್ಲಿ ಸಕ್ರಿಯವಾಗಿ ಜಿಲ್ಲೆಯ ವಿಚಾರವನ್ನು ಮಾತನಾಡಲಾಗುತ್ತಿದೆ. ಮತ್ತು ಉಸ್ತುವಾರಿ ಸಚಿವರು ಅದರ ಬಗ್ಗೆ ಗಮನವನ್ನು ವಹಿಸುತ್ತಿದ್ದಾರೆ. ಈ ಸಭೆಗೆ ಸಾಕಷ್ಟು ಬಾರಿ ಶಾಸಕರು ಹಾಜರಾಗಿ ಕೆಡಿಪಿ ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆಯುತ್ತಾರೆ.
ನಂತರ ಬೆಳ್ತಂಗಡಿಯಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ, ಯಾವುದೇ ಅನುದಾನ ಬರುತ್ತಿಲ್ಲ ಅನ್ನುವ ಬೊಗಳೆಯನ್ನು ಬಿಡುತ್ತಾ ಇಲ್ಲಿಯ ಕೆಡಿಪಿಯನ್ನು ಮಾಡಲಿಕ್ಕೆ ಶಾಸಕರು ಇನ್ನೂ ಮನಸ್ಸು ಮಾಡುತ್ತಿಲ್ಲ. ಬೆಳ್ತಂಗಡಿಗೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಇಲ್ಲಿಯ ಹಾಳಾಗಿರುವಂತಹ ಸೇತುವೆ, ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ. ಇಲ್ಲಿ ಅರಣ್ಯ ವಿಚಾರ ಇರಬಹುದು ಅಥವಾ ಇಲ್ಲಿನ ಜ್ವಲಂತ ಸಮಸ್ಯೆಗಳು ಇರಬಹುದು, ಎಲ್ಲದರ ವಿಚಾರದಲ್ಲಿ ಚರ್ಚೆಯನ್ನು ಮಾಡಿ ಸರ್ಕಾರದ ಗಮನಕ್ಕೆ ತರುವಂತಹ ಕೆಲಸವನ್ನು ಈ ಕೆಡಿಪಿ ಸಭೆ ಮುಖಾಂತರ ಮಾಡಬೇಕಾಗುತ್ತದೆ. ಆದರೆ ಶಾಸಕರು ಇದು ಯಾವುದಕ್ಕೂ ಗಮನ ಹರಿಸದೆ ಕೇವಲ ದ್ವೇಷವನ್ನು ಹರುಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರ ಐದು ಜನ ನಾಮನಿರ್ದೆಶಿತ ಸದಸ್ಯರನ್ನು ನೇಮಕ ಮಾಡಿ ಎರಡು ವರ್ಷ ಆದರೂ ಕೂಡ ಒಂದೇ ಒಂದು ಕೆಡಿಪಿ ಸಭೆ ಮಾಡದೆ ಬೆಳ್ತಂಗಡಿಯ ಅಭಿವೃದ್ಧಿಯನ್ನು ಶಾಸಕರು ಕುಂಟಿತಗೊಳಿಸಿರುತ್ತಾರೆ. ಕೂಡಲೇ ಕೆಡಿಬಿ ಸಭೆಯನ್ನು ಕರೆದು ತಾಲೂಕಿನ ಅಭಿವೃದ್ಧಿಗೆ ಕಡೆ ಗಮನ ಕೊಡಬೇಕೆಂದು ಪ್ರತಿಭಟನೆ ಮುಖಾಂತರ ಶಾಸಕರನ್ನು ಒತ್ತಾಯಿಸಲಾಯಿತು.
ಈ ಪ್ರತಿಭಟನೆ ಸಭೆಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ತಾಲೂಕು ಕೆಡಿಪಿ ಸದಸ್ಯರಾದ ಸುನಿಲ್ ಕುಮಾರ್ ಜೈನ್ ಶಿರ್ಲಾಲು, ಮೆಲ್ವಿನ್ ಸಿಕ್ಕೇರಾ, ಸುಮತಿ ಶೆಟ್ಟಿ ಕಣಿಯೂರು,
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿತೇಶ್, ಉಮೇರ ಬಾನು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನಿಲ್ ಡೇಸಾ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಹಕೀಮ್ ಕೊಕ್ಕಡ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವೂರು, ಯುವ ಕಾಂಗ್ರೆಸ್ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷರಾದ ಅರುಣ್ ಲೋಬೊ, ನವೀನ್ ಗೌಡ ಸವಣಾಲು, ದೀಪಕ್ ಕೋಟ್ಯಾನ್. ಅವಿನಾಶ್ ಕುರ್ತೋಡಿ. ರಾಘವೇಂದ್ರ ಪೂಜಾರಿ. ಗಣೇಶ್ ಕಾಣಿಯೂರು. ಪ್ರಜ್ವಲ್ ಜೈನ್. ಯತೀಶ್ ಧರ್ಮಸ್ಥಳ. ಅಭಿದೇವ್ ಆರಿಗ.ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.