ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಂಘ ಪ್ರಶಸ್ತಿ

0

ಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾಲು ಉತ್ಪಾದನೆ ಹಾಗೂ ವಿವಿಧ ಸಾಧನೆಯನ್ನು ಪರಿಗಣಿಸಿ 2025-26ನೇ ಸಾಲಿನಲ್ಲಿ ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಬೆಳ್ತಂಗಡಿ ತಾಲೂಕಿನ ತಾಲೂಕುವಾರು ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜು.22ರಂದು ಬೆಳ್ತಂಗಡಿಯಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಮಾಲೋಚನೆ ಸಭೆಯಲ್ಲಿ ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಿ.ಕೆ., ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಮಹಮ್ಮದ್ ಶರೀಫ್ ಅವರಿಗೆ ಉತ್ತಮ ಸಂಘ ಪ್ರಶಸ್ತಿ ಹಸ್ತಾಂತರಿಸಿ, ಗೌರವಿಸಲಾಯಿತು.

ಕಳೆದ ಹಲವಾರು ವರ್ಷಗಳಿಂದ ನೆರಿಯ ಸಂಘವು ಹೈನುಗಾರರಿಗೆ ವಿವಿಧ ಯೋಜನೆಗಳನ್ನು ಹಾಕಿಕೊಂಡು ಹಾಲು ಉತ್ಪಾದನೆ, ಪಶು ಆಹಾರ ವಿತರಣೆ, ಗುಣಮಟ್ಟ ಕಾಯ್ದುಕೊಂಡು ಬಂದಿದೆ.

ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ನಿರ್ದೇಶಕ ಪ್ರಭಾಕರ ಪೂಜಾರಿ ಹುಲಿಮೇರು, ಜಯರಾಮ್ ರೈ, ಸವಿತಾ ಶೆಟ್ಟಿ, ವ್ಯವಸ್ಥಾಪಕರು ರವಿರಾಜ್ ಉಡುಪ, ಉಪ ವ್ಯವಸ್ಥಾಪಕ ಪುತ್ತೂರು ವಿಭಾಗದ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು. ಪ್ರಸ್ತುತ ನೆರಿಯ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಿ.ಕೆ., ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಮಹಮ್ಮದ್ ಶರೀಫ್, ವಿಸ್ತಾರಣಾಧಿಕಾರಿ ಸಂದೀಪ್, ಉಪಾಧ್ಯಕ್ಷ ದಯಾನಂದ ಗೌಡ, ನಿರ್ದೇಶಕರಾಗಿ ಎಮ್. ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ, ಶೀನಪ್ಪ ಗೌಡ, ಜೋರ್ಜ್ ಎ,ಜೆ., ಲೀಲಾಧರ್ ಎ.ಎಸ್., ಕಮಲಾಕ್ಷ ಗೌಡ, ದೇವಕಿ, ವಿಮಲ, ಗೀತಾ, ಶೋಭಾ ಪಿ.ಎಸ್., ಸ್ಮಿತಾ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here