


ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಕನ್ನಡ ಭುವನೇಶ್ವರಿ ದೇವಿಯ ಮುಂದೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ರಾದ ಸುಮಂತ್ ಕುಮಾರ್ ಜೈನ್ ಅವರು, ಕನ್ನಡಿಗರಾದ ನಾವು, ಜಾತಿ – ಮತ – ಪಂಥಗಳ ಭೇದ ಮರೆತು, ಕನ್ನಡ ಎನ್ನುವ ಹೆಸರಿನಲ್ಲಿ ಬಾಳುತ್ತಿದ್ದೇವೆ. ಕನ್ನಡ ನಮ್ಮ ಭಾವೈಕ್ಯತೆಯನ್ನು ಹೆಚ್ಚಿಸುವ ಭಾಷೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಅವರು, ಜಗತ್ತಿಗೆ ಕನ್ನಡಿಗರು ನೀಡಿದ ಕೊಡುಗೆ ಅಮೂಲ್ಯವಾದುದು. ಅದನ್ನು ಸ್ಮರಿಸಿ, ಮುಂದುವರೆಸುವ ಜವಾಬ್ದಾರಿ ನಮ್ಮ ತಲೆಮಾರಿನ ಮೇಲಿದೆ ಎಂದರು.

ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್, ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ, ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸತ್ಯ ನಾರಾಯಣ ಭಟ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ., ಮುಖ್ಯಸ್ಥ ಪ್ರಸನ್ನ ಭೋಜ, ಉಪನ್ಯಾಸಕರಾದ ರಘು ಬಿಜೂರು, ಅರುಣ್ ಕ್ಯಾಸ್ಟೋಲಿನ್, ಬಿ.ಜಿ. ಬಿರಾದಾರ್, ಡಾ.ಆಸ್ಟಿನ್, ಉಷಾ ಬಿ.ಕೆ., ದಿಶಾ, ಜ್ಯೋತಿ ಹೆಗ್ಡೆ, ಹೃತಿಕ್, ಚರಣ್, ಅರುಣ್ ಕುಮಾರ್, ಲೇಖನ, ಚೈತ್ರ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ತಿಪ್ಪೇ ಸ್ವಾಮಿ ಪ್ರಾರ್ಥಿಸಿದರು. ಮೊಹಮ್ಮದ್ ಮುನೀರ್ ನಿರೂಪಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಜಯರಾಮ್ ವಂದಿಸಿದರು.









