


ನಾವೂರು: ಕನ್ಯಾಡಿಯಲ್ಲಿ ಕಾರು-ಬೈಕ್ ನಡುವೆ ನಡೆದ ಅವಘಡದಲ್ಲಿ ಮೃತಪಟ್ಟ ಹೊಡಿಕ್ಕಾರು ನಿವಾಸಿ ಚಂದ್ರಹಾಸ್ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ನ. 1ರಂದು ಸಂಜೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ನೀಡಿ, ಮುಂದೆಯೂ ಸಹಕಾರ ನೀಡುವುದಾಗಿ ತಿಳಿಸಿದರು.



ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್, ನಾವೂರು ಗ್ರಾ. ಪಂ. ನಿಕಟಪೂರ್ವಧ್ಯಕ್ಷ ಗಣೇಶ್ ಗೌಡ, ವಿ. ಹಿಂ. ಪರಿಷತ್ ಉಪಾಧ್ಯಕ್ಷ ಶ್ರೀಧರ್ ಗುಡಿಗಾರ್, ನಾವೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ಗೌಡ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ದಿಡುಪೆ, ಪ್ರಮುಖರಾದ ವಿಜಯ ಕೆ. ಹೊಡಿಕ್ಕಾರು, ವಸಂತ ಕುಲಾಲ್ ಹೊಡಿಕ್ಕಾರು ಉಪಸ್ಥಿತರಿದ್ದರು.









