ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಉನ್ನತೀಕರಿಸುವಂತೆ ಶಾಸಕರಿಂದ ಮನವಿ

0

ಬೆಳ್ತಂಗಡಿ: ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆ ಮಚ್ಚಿನ, ಕಳಿಯ, ವೇಣೂರು, ಅಳದಂಗಡಿ, ಪದ್ಮುಂಜ, ಕೊಕ್ರಾಡಿ, ಅರಸಿನಮಕ್ಕಿ ಮುಂತಾದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಹಾಗೂ ಹಲವು ಪದವಿ ಪೂರ್ವ ಕಾಲೇಜುಗಳನ್ನು ಉನ್ನತಿಕರಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪ್ರಾರಂಭಿಸಲು ಮಂಜೂರು ಮಾಡಿ ಆದೇಶಿಸುವಂತೆ ಜು.18ರoದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾನ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಹಾಗೂ ಇದೇ ವಿಷಯವಾಗಿ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ ಹಾಗೂ ಶಿಕ್ಷಣ ಇಲಾಖೆಯ ಕಮಿಷನರ್ ಆಗಿರುವ ತ್ರಿಲೋಕ್ ಚಂದ್ರ ಅವರನ್ನು ಭೇಟಿಯಾಗಿ ಅತೀ ಶೀಘ್ರದಲ್ಲಿ ಮೆಲ್ಕಾಣಿಸಿರುವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪ್ರಾರಂಭಿಸಲು ಮಂಜೂರು ಮಾಡಿ ಆದೇಶಿಸುವಂತೆ ವಿನಂತಿಸಿದರು.

LEAVE A REPLY

Please enter your comment!
Please enter your name here