
ಬೆಳ್ತಂಗಡಿ: ಬೆಳ್ತಂಗಡಿ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿ ಪೇಟೆಯ ಹೃದಯಭಾಗದಲ್ಲಿರುವ ಸಾಂತೋಮ್ ಟವರ್ ವಾಣಿಜ್ಯ ಸಂಕೀರ್ಣದಲ್ಲಿ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಜು.24ರಂದು ಶುಭಾರಂಭಗೊಂಡಿತು.

ಹಲವಾರು ಯಶಸ್ವಿ ಉದ್ಯಮಗಳನ್ನು ಮುನ್ನಡೆಸಿಕೊಂಡು ಬಂದು ಇದೀಗ ಪುಟಾಣಿಗಳ ನೂತನ ವಸ್ತ್ರ ಮಳಿಗೆಯ ಉದ್ಘಾಟನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನೆರವೇರಿಸಿದರು.
ರಕ್ಷಿತ್ ಶಿವರಾಂ ಮಾತನಾಡಿ, ಉದ್ಯಮದಲ್ಲಿ ನೂತನ ಪ್ರಯತ್ನಕ್ಕೆ ಕಾಲಿಟ್ಟಿರುವುದು, ಮೆಚ್ಚುಗೆಗೆ ಪಾತ್ರವಾಗುವಂತಹದ್ದು. ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸಬೇಕು ಎಂಬುದಕ್ಕೆ ಇಮೇಜ್ ಗ್ರೂಪ್ಸ್ ಸಾಕ್ಷಿಯಾಗಿದೆ ಎಂದು ಶುಭಹಾರೈಸಿದರು.
ಡಿ.ಕೆ.ಆರ್.ಡಿ.ಎಸ್. ನ ನಿರ್ದೇಶಕ ಫಾದರ್ ಬಿನೋಯ್ ಎ.ಜೆ. ಮಾತನಾಡಿ, ಸಾಂತೋಮ್ ಟವರ್ ವಾಣಿಜ್ಯ ಸಂಕೀರ್ಣವು ಸಮಾಜಮುಖಿ ಕಾರ್ಯಗಳಿಗೆ ನೆರವಾಗಲಿ ಎಂದು ಆರಂಭಿಸಿದ್ದು, ಈಗ ಯಶಸ್ವಿಯಾಗಿ ಈ ವಾಣಿಜ್ಯ ಸಂಕೀರ್ಣದಲ್ಲಿ ಉದ್ಯಮಗಳು ನಡೆಯುತ್ತಿದೆ. ಇಲ್ಲಿಯ ಉದ್ದಿಮೆದಾರರಿಂದ ಸಮಾಜಸೇವೆಗೆ ದೊಡ್ಡ ಕೊಡುಗೆಯಾಗಿದೆ. ಇಮೇಜ್ ಮೊಬೈಲ್ ನವರ ನೂತನ ವಸ್ತ್ರ ಮಳಿಗೆ ಯಶಸ್ಸು ಸಾಧಿಸಲಿ ಎಂದು ಶುಭ ನುಡಿದರು.

ಬೆಳ್ತಂಗಡಿಯ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಬಟ್ಟೆ ಖರೀದಿಸಲು ಆಕರ್ಷಕ ಅವಕಾಶ ಇದಾಗಿದ್ದು, ಹುಟ್ಟಿದ ಮಗುವಿನಿಂದ ಹಿಡಿದು ಹತ್ತು, ಹದಿನಾಲ್ಕು ವರ್ಷದ ಮಕ್ಕಳವರೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಕೆಜಿ ಲೆಕ್ಕದಲ್ಲಿ ದೊರೆಯಲಿದೆ.

ನೂತನ ಪುಟಾಣಿಗಳ ವಸ್ತ್ರ ಮಳಿಗೆಯಲ್ಲಿ ಮಕ್ಕಳ ತ್ವಚೆಯನ್ನು ಕಾಪಾಡುವಂತಹ ಉನ್ನತ ಗುಣಮಟ್ಟದ ಬಟ್ಟೆಗಳು ಲಭ್ಯವಿದೆ. ಒಂದು ಗ್ರಾಮ್ ಬಟ್ಟೆಗೆ ಒಂದು ರೂಪಾಯಿ, ಒಂದು ಕೆಜಿಗೆ ರೂ. 999, ಒಂದು ಪೀಸ್ ಬಟ್ಟೆಗೆ ರೂ.19ರಿಂದ ಪ್ರಾರಂಭವಾಗಿದ್ದು ರೂ.499 ಕ್ಕೆ ಬ್ರಾಂಡೆಡ್ ಬಟ್ಟೆಗಳು ದೊರೆಯುತ್ತದೆ ಎಂದು ಇಮೇಜ್ ಗ್ರೂಪ್ಸ್ ಮಾಲಕ ಅಝರ್ ನಾವೂರು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾವೂರು ಗ್ರಾಮ ಪಂಚಾಯತ್ ಸದಸ್ಯ ಎನ್.ಕೆ. ಹಸೈನಾರ್, ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಮೆರೀಟ ಪಿಂಟೋ, ಅನುಗ್ರಹ ವಿದ್ಯಾಸಂಸ್ಥೆ ಮತ್ತು ಸೇವಾಕೇಂದ್ರದ ಮುಖ್ಯಸ್ಥ ತಲ್ಹತ್, ಮಹಿಳಾ ಕಾಂಗ್ರೆಸ್ ನ ಝೀನತ್ ಉಜಿರೆ, ಗ್ಯಾರಂಟಿ ಸಮಿತಿ ಸದಸ್ಯೆ ಸೌಮ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಎಂ.ಎನ್. ಕಂಪ್ಯೂಟರ್ಸ್ ಇದರ ಮಾಲಕ ಹೆರಾಲ್ಡ್ ಪಿಂಟೋ, ಸ್ಪಂದನ ಪಾಲಿ ಕ್ಲಿನಿಕ್ ನ ಮಾಲಕ ಮೆಲ್ಬಿ ಪಿ.ಸಿ., ವಿಜಯಾನಂದ ಎಲೆಕ್ಟ್ರಿಕಲ್ಸ್ ನ ಮಾಲಕ ಮೀಟು ಸಿಂಗ್, ತಾಲೂಕು ಅರೋಗ್ಯ ರಕ್ಷಾ ಸಮಿತಿ ಸದಸ್ಯ ನವೀನ್, ಶೇಖರ್ ಲಾಯಿಲ ಹಾಗೂ ಇತರರು ಉಪಸ್ಥಿತರಿದ್ದರು.