ಬಂಟರ ಕುವೆಟ್ಟು ಗ್ರಾಮ ಸಮಿತಿ ರಚನೆ: ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಆಯ್ಕೆ

0

ಬೆಳ್ತಂಗಡಿ: ಗುರುವಾಯನಕೆರೆಯ ಬಂಟರ ಭವನದಲ್ಲಿ ಜು.20ರಂದು ಕುವೆಟ್ಟು ಬಂಟರ ಗ್ರಾಮ‌ ಸಮಿತಿಯ ನೂತನ‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆದಿದ್ದು, ಪ್ರದೀಪ್ ಶೆಟ್ಟಿ ಪಾಡ್ಯಾರು ಮಜಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮೋದಿನಿ ಶೆಟ್ಟಿ ಶಕ್ತಿ ನಗರ, ಸುಪ್ರಿತಾ ಶೆಟ್ಟಿ ಗದ್ದೆಮನೆ, ಕಾರ್ಯದರ್ಶಿಯಾಗಿ ಜಯರಾಮ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ರವೀಂದ್ರ ಶೆಟ್ಟಿ,
ಕೋಶಾಧಿಕಾರಿಯಾಗಿ ಸಚಿನ್ ಶೆಟ್ಟಿ, ಕ್ರೀಡಾ ಸಂಚಾಲಕರಾಗಿ ಪ್ರೀತಂ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಂಜಿತ್ ಮದ್ದಡ್ಕ, ಪುರಂದರ ಶೆಟ್ಟಿ ಶಕ್ತಿ ನಗರ, ಸುಪ್ರಿತಾ ಕಡಂಬು, ಹೇಮಂತ್ ದೇವಸ್ಯ, ಪ್ರಥಮ್ ಶೆಟ್ಟಿ ಪಣೆಜಾಲು, ರಾಮಚಂದ್ರ ಶೆಟ್ಟಿ ಪಾಡ್ಯಾರು, ಪುರಂದರ ಶೆಟ್ಟಿ ಪಾಡ್ಯಾರು, ವಿಠಲ ಶೆಟ್ಟಿ ಪಾಡ್ಯಾರು, ಸೀತಾರಾಮ ಶೆಟ್ಟಿ ಸುಧೆಕಾರು, ವಿಜೇಶ್ ರೈ ಶಕ್ತಿ ನಗರ, ವಸಂತ ಶೆಟ್ಟಿ ಕಂದಡಿಗುಡ್ಡೆ, ಮಮತಾ ಶೆಟ್ಟಿ ದೇವಸ್ಯ,‌ ಅರುಣಾ ಶೆಟ್ಟಿ ಕಂದಡಿಗುಡ್ಡೆ, ಚಂದ್ರಶೇಖರ ಅಮರ್ಜಾಲು, ನವೀನ್ ಶೆಟ್ಟಿ ಮದ್ದಡ್ಕ ಗೌರವ ಸಲಹೆಗಾರರಾಗಿ ಟಿ. ಕೃಷ್ಣ ರೈ ಮದ್ದಡ್ಕ ನೇಮಕಗೊಂಡಿದ್ದಾರೆ.

ತಾಲೂಕಿನ ಸ್ಪಂದನ ಬಂಟರ ಸೇವಾ ತಂಡದ 42ನೇ ಸೇವಾಯೋಜನೆಯಡಿ ಉಷಾ ಶೆಟ್ಟಿ ಆರಂಬೋಡಿ ಇವರ ಪತಿ ರಘುರಾಮ ಶೆಟ್ಟಿಯವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂ. 10,000 ಸಹಾಯಧನ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ತಾಲೂಕು ಬಂಟರ ಯಾನೆ ನಾಡವರ ಸಂಘದ ಸಂಘಟನಾ ಕಾರ್ಯದರ್ಶಿ ಉಜಿರೆಯ ಸೀತಾರಾಮ ಶೆಟ್ಟಿ, ಕೆಂಬರ್ಜೆ ವಹಿಸಿದ್ದರು. ರಾಜಪ್ಪ ಶೆಟ್ಟಿ ಸುಧೆಕಾರು ಗೌರವ ಉಪಸ್ಥಿತಿ ವಹಿಸಿದ್ದು, ಅತಿಥಿಗಳಾಗಿ ಬೆಳ್ತಂಗಡಿಯ ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ, ನಿರ್ದೇಶಕ ರಾಜು ಶೆಟ್ಟಿ ಬೆಂಗತ್ಯಾರು, ಕುವೆಟ್ಟು ವಲಯ ಬಂಟರ ಯಾನೆ ನಾಡವರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎನ್.ಆನಂದ ಶೆಟ್ಟಿ ಐಸಿರಿ ಪಡೆಪಾಲು, ನಿಕಟ ಪೂರ್ವ ಅಧ್ಯಕ್ಷ ಪುರಂದರ ಶೆಟ್ಟಿ ಪಾಡ್ಯಾರು, ಮಾಜಿ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ ಪಾಡ್ಯಾರು ಉಪಸ್ಥಿತರಿದ್ದರು.

ಪುರಂದರ ಶೆಟ್ಟಿ ಪಾಡ್ಯಾರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ತಾಲೂಕು ಬಂಟರ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಶೆಟ್ಟಿ ಪಾಡ್ಯಾರು ಧನ್ಯವಾದಗೈದರು.

LEAVE A REPLY

Please enter your comment!
Please enter your name here