ಧರ್ಮಸ್ಥಳ: ಸೌಜನ್ಯ ಗೆ ನ್ಯಾಯ ಸಿಗಬೇಕೆಂದು ಪಾದಾಯಾತ್ರೆ ಮೂಲಕ ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ಬಂದಿರುವ ಕಬ್ಜಾ ಶರಣ್ ತಂಡವನ್ನು ಧರ್ಮಸ್ಥಳ ದ್ವಾರದ ಧರ್ಮಸ್ಥಳ ಗ್ರಾಮಸ್ಥರು ತಡೆದರು.
ಕಬ್ಜಾ ಶರಣ್ ನ್ನು ಧರ್ಮಸ್ಥಳ ದ್ವಾರದ ಬಳಿ ತಡೆದ ಗ್ರಾಮಸ್ಥರು ಕ್ಷೇತ್ರದ ಹೆಸರು ಕೆಡಿಸಲು ಪಾದಯತ್ರೆ ನಡೆಸುತ್ತಿದ್ದು, ಲೈವ್ ನಲ್ಲಿ ನಕಲಿ ದೇವಮಾನವ ಎಂದಿರುವುದಕ್ಕೆ ಸ್ಪಷ್ಟಣೆ ಕೇಳಿದರು. ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡಿರುವ ಆರೋಪ ಹಿನ್ನಲೆಯಲ್ಲಿ ಕಬ್ಜಾ ಶರಣ್ ನನ್ನು ತಡೆದು ಗ್ರಾಮಸ್ಥರು ಪ್ರಶ್ನಿಸಿದರು.ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಭಯದ ವಾತಾವರಣವಿದೆ, ಪಾದಯಾತ್ರೆ ವೇಳೆ ತನ್ನನ್ನು ಫಾಲೋ ಮಾಡಿದ್ರು ಅಂತ ಹೇಳಿದ್ದ ಶರಣ್ ಗೆ,ಫಾಲೋ ಮಾಡಿದ ಗಾಡಿ ನಂಬರ್ ಕೇಳಿ ಗ್ರಾಮಸ್ಥರು ಪಟ್ಟು ಹಿಡಿದರು. ಅಲ್ಲದೇ, ಲೈವ್ ಮೂಲಕ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.ವೀಡಿಯೋ ಲೈಕ್,ಶೇರ್ ಗಾಗಿ ನಾಟಕ ಮಾಡಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಧರ್ಮಸ್ಥಳ ಪೊಲೀಸರು ಮಧ್ಯ ಪ್ರವೇಶಿಸಿ ನೆರೆದ ಗುಂಪನ್ನು ಚದುರಿಸುವ ಕಾರ್ಯ ಕೈಗೊಂಡರು. ಇದೀಗ ಕಬ್ಜಾ ಶರಣ್ ತಂಡ ಪೊಲೀಸ್ ಠಾಣೆಗೆ ತೆರಳಿದೆ. ಕಬ್ಜಾ ಶರಣ್ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.