



ಬಳ್ಳಮಂಜ: ಶ್ರೀ ಕ್ಷೇತ್ರ ಬಳ್ಳಮಂಜದಲ್ಲಿ ನೂತನವಾಗಿ ನಿರ್ಮಿಸುವ ಶಿಲಾಮಯ ಈಶ್ವರ ದೇವರ ಗರ್ಭಗುಡಿ ಹಾಗು ತೀರ್ಥ ಮಂಟಪದ ಶಿಲಾನ್ಯಾಸ ಸಮಾರಂಭವು ಬ್ರಹ್ಮಶ್ರೀ ದೇರೆಬೈಲು ಡಾ /ಶಿವಪ್ರಸಾದ್ ತಂತ್ರಿ ಗಳವರ ಮಾರ್ಗದರ್ಶನದಲ್ಲಿ ಕಟೀಲು ಅನುವಂಶಿಯ ಅರ್ಚಕ ವೇದಮೂರ್ತಿ ಶ್ರೀ ಹರಿನಾರಾಯಣ ದಾಸ ಅಸ್ರಣ್ಣರವರಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಕೆ.ಕೆ ಸಂಪಿಗೆತ್ತಾಯ, ಹರೀಶ್ ಇಂಜಾಡಿ, ವಿವೇಕಾನಂದ ಪ್ರಭು, ಗಿರಿಯಪ್ಪ ಗೌಡ ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರದ ಅನುವಂಶಿಯ ಆಡಳಿತ ಮೊಕ್ತೇಸರ ಡಾ /ಎಂ. ಹರ್ಷ ಸಂಪಿಗೆತ್ತಾಯ ದಂಪತಿ ಸಹಿತವಾಗಿ ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು. ಅಶೋಕ್ ಸಂಪಿಗೆತ್ತಾಯ, ವಿಶು ಸಂಪಿಗೆತ್ತಾಯ, ಚಂದ್ರಕಾಂತ ನಿಡ್ಡಾಜೆ, ಸತೀಶ್ ಕಾರಂದೂರು, ಪ್ರಶಾಂತ್ ಶೆಟ್ಟಿ ಮೂಡಯೂರ್, ಇಂಜಿನಿಯರ್ ಪ್ರಸಾದ್ ರೈ ಹಾಗೂ ಶ್ರಮದಾನದಲ್ಲಿ ಭಾಗಿಯಾದ ಭಕ್ತಾದಿಗಳು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರದ ಗುತ್ತಿನ ಮನೆಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗಣ್ಯರಿಗೆ ಶಾಲು ಹಾಕಿ ಅನುವಂಶಿಯ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ ಗೌರವ ಸಮರ್ಪಿಸಿದರು. ದೇವಾಲಯದ ಪ್ರಬಂಧಕ ಬಾಲಕೃಷ್ಣ ಬಿ. ಕಾರ್ಯಕ್ರಮ ನಿರೂಪಿಸಿದರು.









