ಕಾಶಿಪಟ್ಣ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜು. 21ರಂದು ಕಾಶಿಪಟ್ಟಣ ಗ್ರಾ. ಪಂ. ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಎಸ್. ಚಂದ್ರಶೇಖರ್ ಸಭೆಯನ್ನು ಮುನ್ನಡೆಸಿದರು. ಪಂಚಾಯತ್ ಉಪಾಧ್ಯಕ್ಷೆ ಶುಭವಿ, ಪಂಚಾಯತ್ ಸದಸ್ಯರಾದ ಶಿಲ್ಪಾ, ಸುಶೀಲ, ಅಶೋಮರ್ಕ್ಗದರ್ಸ್ ಕುಮಾರ್, ರವೀಂದ್ರ ಪಿ., ಸವಿತಾ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್. ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಲೀನಾ ಬನಾಟಿಕ್ ಲೋಬೊ ಕಾರ್ಯಕ್ರಮ ವರದಿ ಮಂಡನೆ ಮಾಡಿ, ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯ ವಿವರ ನೀಡಿದರು. ಸಿಬ್ಬಂದಿಗಳು ಸಹಕರಿಸಿದರು. ಸಭೆಯಲ್ಲಿ ಪಶುಸಂಗೋಪನೆ, ಮೆಸ್ಕಾಂ ಇಲಾಖೆ, ಗ್ರಾ. ಆಡಳಿತಾಧಿಕಾರಿ, ಅರಣ್ಯ ಇಲಾಖೆ, ಶಿಶು ಇಲಾಖೆ, ಕಂದಾಯ ಇಲಾಖೆ, ಅಬುಕಾರಿ ಇಲಾಖೆ, ಜಿಲ್ಲಾ ಇಂಜಿನಿಯರ್ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.