ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

0

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್‌ ಟ್ರಸ್ಟ್ ನಡೆಸುತ್ತಿರುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಸಮರ್ಥ ಸಂಪತ್ತು ನಿರ್ಮಾಣದ ಮಾರ್ಗಗಳು – ಮ್ಯೂಚುವಲ್ ಫಂಡ್ಸ್ ಮತ್ತು ಹೂಡಿಕೆದಾರ ಜಾಗೃತಿ”ಎಂಬ ವಿಷಯದ ಮೇಲೆ ಮಾಹಿತಿ ಕಾರ್ಯಾಗಾರವನ್ನು ಡಿ. 11ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಹೂಡಿಕೆ, ಮ್ಯೂಚುವಲ್ ಫಂಡ್ಸ್, ಮತ್ತು ಸಮರ್ಪಕ ಹಣಕಾಸು ಯೋಜನೆಗಳ ಮಹತ್ವವನ್ನು ತಿಳಿಸುವುದಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅರ್ಜುನ ಮಹೇಶ್ ಅವರು ಹಾಜರಿದ್ದರು. ಅವರು ಪ್ರಸ್ತುತ ಫೈನಾನ್ಸ್ ಕ್ಷೇತ್ರದಲ್ಲಿ ತಜ್ಞರಾಗಿ, ಶಿಕ್ಷಕರಾಗಿಯು ಸೇವೆ ಸಲ್ಲಿಸುತ್ತಿದ್ದು, ಮ್ಯೂಚುವಲ್ ಫಂಡ್ಸ್, ಹೂಡಿಕೆ ತಂತ್ರಗಳು, ಮತ್ತು ಹಣಕಾಸು ನಿರ್ವಹಣೆಯ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಯುವ ಪೀಳಿಗೆ ಹಣಕಾಸು ಜಾಗೃತಿಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವೆಂದು ಅವರು ತಮ್ಮ ಉಪನ್ಯಾಸದಲ್ಲಿ ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್. ಜಿ. ನಾಯಕ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಫಾತಿಮಾ ತೃತೀಯ ಬಿ. ಕಾಮ್ ಸ್ವಾಗತಿಸಿ, ಸುಪ್ರಿಯಾ ತೃತೀಯ ಬಿ.ಕಾಮ್ ವಂದಿಸಿದರು.

LEAVE A REPLY

Please enter your comment!
Please enter your name here