ಬಳಂಜ: ಕಂಪ್ಯೂಟರ್ ಕೊಠಡಿಗೆ ಶಿಲಾನ್ಯಾಸ: ಸರಕಾರಿ ಶಾಲೆ ಬೆಳಗಳು ಊರವರ ಸಹಕಾರ ಅಗತ್ಯ: ಹರೀಶ್ ಕುಮಾರ್

0

ಬಳಂಜ: ಹಿರಿಯರು ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು ಎಂದು ಕಷ್ಟದ ಸಮಯದಲ್ಲಿ ಶಾಲೆ ಪ್ರಾರಂಬಿಸಿದ ಪರಿಣಾಮ ಸಾವಿರಾರು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಹಿರಿಯರ ಕೊಡುಗೆಯನ್ನು ಮರೆಯಬಾರದು.

ಈ ನಿಟ್ಟಿನಲ್ಲಿ ಬಳಂಜದಲ್ಲಿ ಇವರ ಸೇವೆಯನ್ನು ಮುಂದುವರೆಸುವ ಕಾರ್ಯ ನಡೆಯುತ್ತಿದ್ದು ಇದು ಇತರರಿಗೆ ಮಾದರಿಯಾಗಿದೆ. ಸರಕಾರಿ ಶಾಲೆ ಉಳಿಸಿ ಬೆಳೆಸಲು ಗ್ರಾಮಸ್ಥರ ಕೊಡುಗೆ ಅಗತ್ಯ ಎಂದು ಮಾಜಿ ವಿದಾನ ಪರಿಷತ್ ಸದಸ್ಯ, ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು. ಅವರು ಡಿ. 12ರಂದು ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ರಿ ನ ನೇತ್ರತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 4ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಮಂಗಳೂರು ಮೆಸ್ಕಾಂ ಅದ್ಯಕ್ಷ ಕೆ. ಹರೀಶ್ ಕುಮಾರ್ ಅವರ ಶಿಪಾರಸ್ಸಿನಂತೆ ಎಂ. ಅರ್. ಪಿ. ಎಲ್. ನ ಸಿ.ಎಸ್.ಆರ್ ಅನುದಾನದಿಂದ 15 ಲಕ್ಷ ರೂ. ಮಂಜೂರುಗೊಳಿಸಿದ್ದು, ಇದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಸರಕಾರ ಸರಕಾರಿ ಶಾಲೆಯಲ್ಲಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಗುಣಾತ್ಮಕ ಶಿಕ್ಷಣ ಸಹಕಾರಿಯಾಗಿದೆ.

ಸರಕಾರಿ ಶಾಲೆಯಲ್ಲಿ ಕಲಿತ ಅನೇಕರು ಅತ್ಯುತ್ತಮ ಸಾಧಕರಾಗಿದ್ದಾರೆ. ಇದರಿಂದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ಮಾಡಬಾರದು ಎಂದರು. ಬಳಂಜ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಶಿಕ್ಷಣ ನೀಡುವ ಚಿಂತನೆ ಅಬಿನಂದನೀಯ ಎಂದರು.

ಬಳಂಜ ಶಾಲಾ ಅಮೃತ ಮಹೋತ್ಸವ ಅದ್ಯಕ್ಷ ಚಂದ್ರಶೇಖರ ಪಿ. ಕೆ. ಮಾತನಾಡಿ ಬಳಂಜ ಶಿಕ್ಷಣ ಟ್ರಸ್ಟ್, ಅಮೃತ ಮಹೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ ,ಯುವಕ ಮಂಡಲ,ಮಹಿಳಾ ಮಂಡಲ ಹಾಗು ಇತರ ಅನೇಕ ಸಂಘ ಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲರ ಸಹಕಾರದೊಂದಿಗೆ ಡಿ. 13,14 ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಮತ್ತು ಅನೇಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷ ರತ್ನಾಕರ್, ಅಮೃತ ಮಹೋತ್ಸವ ಸಮಿತಿಯ ಗೌರವಾದ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಪ್ರಧಾನ ಸಂಚಾಲಕ ಅಶ್ವಥ್ ಹೆಗ್ಡೆ, ಸ್ಮರಣ ಸಂಚಿಕೆ ಸಂಚಾಲಕ ದಿನೇಶ್ ಪಿ.ಕೆ, ಅಳದಂಗಡಿ ಪ್ರಾಥಮಿಕ ಕ್ರುಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇಜಪ್ಪ ಪೂಜಾರಿ, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮಹೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ್ ಜೈನ್ ಪೇರಂದಬೈಲ್, ಟ್ರಷ್ಡಿಗಳಾದ ಪ್ರಮೋದ್ ಜೈನ್, ಸಂತೋಷ್ ಕಾಪಿನಡ್ಕ, ಉದ್ಯಮಿ ದೀಪಕ್ ಹೆಚ್.ಡಿ., ಅಶ್ವಿನ್ ಬಳಂಜ, ಡೀಕಯ್ಯ ಕೆ., ಬಳಂಜ ಗ್ರಾಮ ಪಂಚಾಯತಿ ಅದ್ಯಕ್ಷೆ ಶೋಭಾ ಕುಲಾಲ್, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಹರೀಶ್ ವೈ, ಮಹಿಳಾ ಮಂಡಲದ ಅದ್ಯಕ್ಷೆ ಚೇತನಾ, ಯುವಕ ಮಂಡಲದ ಅದ್ಯಕ್ಷ ಸುಕೇಶ್ ಹಾಣಿಂಜ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಅಡಳಿತ ಮೊಕ್ತೆಸರ ಶೀತಲ್ ಪಡಿವಾಳ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನ, ಪಿ. ಡಬ್ಲ್ಯೂ.ಡಿ. ಇಂಜಿನಿಯರ್ ಸೂರಜ್, ಪ್ರಗತಿಪರ ಕ್ರುಷಿಕ ದನ್ಯಕುಮಾರ್, ಶಿಕ್ಷಕರು, ಹಳೆವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಸುಲೋಚನ ವಂದಿಸಿದರು.

LEAVE A REPLY

Please enter your comment!
Please enter your name here