ಜೂ.25: ವೇಣೂರು ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

0

ಬೆಳ್ತಂಗಡಿ: ವೇಣೂರು ಶಾಖಾ ವ್ಯಾಪ್ತಿಯ 11 ಕೆವಿ ಹೊಸಂಗಡಿ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಪೆರಿಂಜೆ ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಾಗೂ ಹೆಚ್.ಟಿ. ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, 33/11 ಕೆವಿ ವೇಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಹೊಕ್ಕಾಡಿಗೋಳಿ, ವೇಣೂರು ಟೌನ್, ಹೊಸಂಗಡಿ, ನಿಟ್ಟಡೆ, ಮರೋಡಿ ಹಾಗೂ ಅಂಡಿಂಜೆ ಫೀಡರುಗಳಲ್ಲಿ ಜೂ.25 ರಂದು ಬೆಳಿಗ್ಗೆ ಗಂಟೆ: 10.00ರಿಂದ ಸಂಜೆ ಗಂಟೆ:5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಇಲಾಖೆ ಪತ್ರಿಕೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here