




ವೇಣೂರು: ಲಯನ್ಸ್ ಕ್ಲಬ್ ವೇಣೂರುಗೆ ಪ್ರಾಂತ್ಯ ಅಧ್ಯಕ್ಷರ ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಜರಗಿತು.
ಅಧ್ಯಕ್ಷತೆ ವಹಿಸಿದ್ದ ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಸೇವ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಜಯರಾಮ್ ಹೆಗಡೆ ಮಂಡಿಸಿದರು. ಸ್ಥಳೀಯ ಗ್ರಾಮ ಸಹಾಯಕ ಜಗದೀಶ ದೇವಾಡಿಗ ಅವರನ್ನು ಅವರ ವಿಶೇಷ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅನೇಕ ಸೇವಾ ಚಟುವಟಿಕೆಗಳು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಜರಗಿತು. ಮಾಜಿ ಅಧ್ಯಕ್ಷ ನಿತೇಶ್ ಎಚ್., ಪ್ರಾಂತ್ಯ ಅಧ್ಯಕ್ಷರ ಪರಿಚಯವನ್ನು ಸಭೆಗೆ ಮಾಡಿದರು. ತರುವಾಯ ಪ್ರಾಂತ್ಯ ಅಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಕ್ಲಬ್ ಗಳಲ್ಲಿ ಒಂದಾದ ವೇಣೂರು ಕ್ಲಬ್ ವಿಶೇಷವಾಗಿ ಎರಡು ಬಾರಿ ರಕ್ತದಾನ ಶಿಬಿರ ಹಾಗೂ ಸ್ಥಳೀಯ ಅಂಬುಲೆನ್ಸ್ ಗೆ ಸಹಾಯಧನ ವೈದ್ಯಕೀಯ ಶಿಬಿರಗಳನ್ನು ಹಾಗೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಾಂತ್ಯ ಮಾತ್ರವಲ್ಲ ಲಯನ್ಸ್ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಮೂಡಿಬಂದಿದೆ, ವಿಶೇಷವಾಗಿ ಕ್ಲಬ್ ನ ಮಾಜಿ ಪ್ರಾಂತ್ಯಧ್ಯಕ್ಷ ಲಯನ್ ಪ್ರವೀಣ್ ಕುಮಾರ್ ಇಂದ್ರ ತಮ್ಮ ಅಧಿಕಾರಾವಧಿಯಲ್ಲಿ ಕ್ಲಬ್ ಗೆ ಸ್ವಂತ ಕಟ್ಟಡ ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷ ಜಗದೀಶ್ ಚಂದ್ರ ಡಿ.ಕೆ. ಅವರ ಸೇವೆಯನ್ನು ಸ್ಮರಿಸಿದರು.


ಅಲ್ಲದೆ ನಿಯೋಜಿತ ಅಧ್ಯಕ್ಷ ಸುಧೀರ್ ಭಂಡಾರಿ, ಕಾರ್ಯದರ್ಶಿ ಜಯರಾಮ್ ಹೆಗ್ಡೆ, ಕೋಶಾಧಿಕಾರಿ ಸತೀಶ್ ಚಿಗುರು ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷ ಜಗದೀಶಚಂದ್ರ ಡಿ.ಕೆ. ಹಾಗೂ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಪ್ರಾಂತ್ಯ ಅಧ್ಯಕ್ಷ ದಂಪತಿಯನ್ನು ಹಾಗೂ ವಲಯ ಅಧ್ಯಕ್ಷರಿಗೆ ಗೌರವಿಸಲಾಯಿತು. ವಲಯ ಅಧ್ಯಕ್ಷ ಉಮೇಶ್ ಶೆಟ್ಟಿ ಹಾಗೂ ರೋಷನ್ ಡಿಸೋಜ, ಪ್ರಾಂತ್ಯ ರಾಯಬಾರಿ ವಸಂತ್ ಶೆಟ್ಟಿ ಶ್ರದ್ಧಾ ಶುಭ ಸಂಶನೆಗೈದರು. ವೇದಿಕೆಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಪ್ರತಿಭಾ ಹೆಬ್ಬಾರ್, ಝೋನ್ ಎನ್. ವೈ. ಜೆಸ್ಸಿ ಮೆನೇಜಸ್, ಕಾರ್ಯದರ್ಶಿ ಜಯರಾಮ್ ಹೆಗಡೆ, ಕೋಶಾಧಿಕಾರಿ ಧನಂಜಯ್ ಭಂಡಾರಿ, ದೇವದಾಸ ಶೆಟ್ಟಿ ಹಿಬರೋಡಿ, ಬಿ., ಶಿವಪ್ರಸಾದ್, ರವಿ ಶೆಟ್ಟಿ ಸುಲ್ಕೇರಿ, ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಜಗದೀಶ್ ಚಂದ್ರ ಡಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.









