ಉಜಿರೆ: ಶಿಶು ಮಂದಿರದಿಂದ ಡಾಕ್ಟರೇಟ್ ಪಡೆಯುವವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಸಂಸ್ಥೆ ನಮ್ಮದು ಇಲ್ಲಿ ಎಲ್ಲವೂ ಸುಸಜ್ಜಿತ, ಸ್ವಚ್ಛ, ಆರೋಗ್ಯಕರ ವಾತಾವರಣವಿದೆ. ರಾಜ್ಯದ ನಾನಾ ಮೂಲೆಯಿಂದ ಸಂಸ್ಥೆಯ ಮೇಲಿನ ಅಭಿಮಾನದಿಂದ ವಿದ್ಯಾರ್ಥಿಗಳು ಹರಿದು ಬರುತ್ತಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ. ಕೇವಲ ಐದು ವರ್ಷಗಳ ಕಾಲ ಕಷ್ಟಪಟ್ಟು ಓದಿದರೆ ಮುಂದಿನ 50ಕ್ಕೂ ಮೇಲ್ಪಟ್ಟ ಕಾಲ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು ಹಾಗಾಗಿ ಕಲಿಕೆಯಲ್ಲಿ ಶ್ರದ್ದೆಯಿರಲಿ. ಮೌಲ್ಯಯುತವಾದ ಸಂಸ್ಕಾರದಿಂದ ಕೂಡಿದ ಕಲಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಸಾಧನೆಯೊಂದಿಗೆ ಮುಂದುವರಿಯುವಂತಾಗಲಿಯೆಂದು
ಎಸ್. ಡಿ. ಎಂ.ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ದೀಪ ಬೆಳಗಿಸಿ ಶುಭ ಕೋರಿ ನುಡಿದರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಅಗತ್ಯ ಮಾಹಿತಿ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಶೈಕ್ಷಣಿಕ ರೂಪುರೇಷೆಗಳ ಕುರಿತಾಗಿ ಮಾಹಿತಿ ನೀಡಿದರು.
ಕಾಲೇಜಿನ ವಸತಿ ನಿಲಯದ ನಿಯಮಗಳ ಕುರಿತಾಗಿ ಶಾರೀರಿಕ ಶಿಕ್ಷಕ ಲಕ್ಷ್ಮಣ ಜಿ. ಡಿ. ಸವಿವರವಾಗಿ ವಿವರಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗಣಕ ಶಾಸ್ತ್ರದ ಉಪನ್ಯಾಸಕ ಪವಿತ್ರ ಕುಮಾರ್ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಪ್ರಿಯ ನಿರೂಪಿಸಿ, ವಂದಿಸಿದರು.