ಮಡಂತ್ಯಾರು: ಗಾರ್ಡಿಯನ್ ಏಂಜಲ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮನೋತ್ತರ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭ ಸೇಕ್ರೆಡ್ ಹಾರ್ಟ್ ಸಮುದಾಯ ಭವನ ಜೂ. 2ರಂದು ಜರಗಿತು.

ಕಥೋಲಿಕ್ ವಿದ್ಯಾ ಮಂಡಳಿ, ಮಂಗಳೂರು ಕಾರ್ಯದರ್ಶಿ ಪ್ರವೀಣ್ ಲಿಯೋ ಲಸ್ರಾದೊ, ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದರು. ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು
ಡಾ। ಸ್ಟೇನಿ ಗೋವಿಯಸ್, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಎ.ಎಸ್., ಪುಂಜಾಲಕಟ್ಟೆ ಕ್ಲಸ್ಟರ್ ಸಮೂಹ ವ್ಯಕ್ತಿ ಚೇತನ, ಸೆಕ್ರೆಡ್ ಹಾರ್ಟ್ ಚರ್ಚ್ ಸಹಾಯ ಧರ್ಮ ಗುರು ಲಾರಿ ಪಿಂಟೊ, ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಲಿಯೋ ರೋಡಿಗ್ರಸ್, ಶಿಕ್ಷಕ-ರಕ್ಷಕ ಸಂಘ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಕ-ರಕ್ಷಕ ಸಂಘ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾ. ದೀಪಕ್ ಡೆಸಾ, ನಿವೃತ್ತ ಶಿಕ್ಷಕ ಲಿಯೋ ಡಿಸೋಜಾ, ಜೊಯೇಲ್ ಮೆಂಡೋನ್ಸ, ವಿನ್ಸೆಂಟ್ ಡಿಸೋಜಾ, ನಿವೃತ್ತ ಶಿಕ್ಷಕ ಆಲ್ಬರ್ಟ್ ಡಿಸೋಜಾ, ಪೋಷಕರು, ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕ-ರಕ್ಷಕ ಸಂಘ, ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಜೆರಾಲ್ಡ್ ಮೋರಸ್ ಪ್ರಾಸ್ತವಿಕವಾಗಿ ಮಾತನಾಡಿದರು. ಹೆಲೆನ್ ಮೋನಿಕಾ ಲೋಬೋ ಮುಖ್ಯ ಶಿಕ್ಷಕಿ ಸ್ವಾಗತಿಸಿ, ಜೋರ್ಜ್ ಅಂದ್ರದೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೆಜಿನಾ ವಂದಿಸಿದರು.