ಕಾಶಿಪಟ್ಣ: ಮಿತ್ತೊಟ್ಟು ನಿವಾಸಿ ದೀಪಕ್ ಕೆ. ಸಾಲಿಯಾನ್ (33ವ) ಲೀವರ್ ಸಮಸ್ಯೆಯಿಂದಾಗಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ.27ರಂದು ನಿಧನರಾಗಿದ್ದಾರೆ.
ಮೃತರು ಕಾಶಿಪಟ್ಣದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಜೊತೆಗೆ ಶಾರದೋತ್ಸವ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ತಂದೆ ಕರಿಯ ಪೂಜಾರಿ, ತಾಯಿ ಪುಷ್ಪವತಿ, ಸಹೋದರರಾದ ದಿಲೀಪ್, ಚೇತನ್ ರವರನ್ನು ಅಗಲಿದ್ದಾರೆ.