ಕುಕ್ಕೇಡಿ: ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ವತಿಯಿಂದ ಮೇ.12 ರಿಂದ 17ರವರೆಗೆ ಕುಕ್ಕೇಡಿಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಮೇ.27ರಂದು ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ.ಕೆ. ವಿತರಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಅಭಿವೃದ್ಧಿ ಅಧಿಕಾರಿ ನವೀನ್ ಎ., ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೇಸಿಗೆ ಶಿಬಿರದಲ್ಲಿ ಅಧ್ಯಕ್ಷರು ಮಕ್ಕಳಿಗೆ ಓದುವ ಬರೆಯುವ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಕ್ಕಳಿಗೆ ನಮ್ಮೂರಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಗ್ರಂಥಾಲಯದ ಮಹತ್ವ, ಚಿತ್ರ ಕಲೆ ಕಥೆ ಬರೆಯುವುದು, ಓದುವುದು, ಇತರ ಚಟುವಟಿಕೆಗಳನ್ನು ಮಾಡಿ ಸಲಾಯಿತು. ಸ. ಹಿ. ಪ್ರಾಥಮಿಕ ಶಾಲೆ ಪೆಮು೯ಡ ಇಲ್ಲಿಯ ಶಿಕ್ಷಕಿ ಸುಜಾತಾ ಕ್ರಾಪ್ಟ್, ಬಲೂನಿನ ಸಹಾಯದಿಂದ ಪಿರಮಿಡ್ ರಚನೆ, ಮೋಜಿನ ಗಣಿತ, ಆಟೋಟ ಸ್ಪರ್ಧೆ ಮಾಡಿಸಿದರು. ಶಿಕ್ಷಕಿ ಮೋಹಿನಿ ಮಕ್ಕಳಿಗೆ ಯೋಗಾಸನದ ಮಾಹಿತಿ ನೀಡಿ ಯೋಗಾಭ್ಯಾಸ ಮಾಡಿಸಿದರು.