ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪಗೌಡ ಮತ್ತು ಜಾಜೀವಿಯವರ ವೈವಾಹಿಕ ಜೀವನದ ‘ಸ್ವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾಧೀಶ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

0

ಬೆಳ್ತಂಗಡಿ: ತಣ್ಣೀರುಪಂತ ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಜಾಜೀವಿಯವರ ವೈವಾಹಿಕ ಜೀವನದ 50ರ ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆ ‘ಸ್ವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ಮೇ.25ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಾರ್ವಕ ಶ್ರೀ ಕಪಿಲೇಶ್ವರ ಕಲಾ ಸಮಿತಿಯಿಂದ ಚೆಂಡೆ, ಅಂಜಲಿ ಭಟ್ ರಿಂದ ವಾಯ್ಲಿನ್ ವಾದನ ಹಾಗು
ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ರವರಿಂದ ಹಾಸ್ಯ ಸ್ಪಂದನ ಕಾರ್ಯಕ್ರಮವಿತ್ತು.

ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಧರ್ಮಪಾಲನಾಥ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನ ನೀಡಿ, ದುಗ್ಗಪ್ಪ ಗೌಡ ದಂಪತಿಗಳ ‘ಸ್ವರ್ಣ ಸಂಭ್ರಮ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ದುಗ್ಗಪ್ಪ ಗೌಡ ದಂಪತಿಗಳು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಸ್ವರ್ಣ ಸಂಭ್ರಮ ಪ್ರಯುಕ್ತ ದುಗ್ಗಪ್ಪ ಗೌಡ ದಂಪತಿಗಳು ಕಲ್ಲಕಟ್ಟಣಿ ಶಾಲೆಗೆ ಟಿ. ವಿ ನೀಡಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಬಂಧು ಮಿತ್ರರು, ಹಿತೈಷಿಗಳು ದುಗ್ಗಪ್ಪ ಗೌಡ ದಂಪತಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ತೆಂಗಿನ ಸಸಿ ವಿತರಿಸಲಾಯಿತು.

ಪೊಸಂದೋಡಿ ಕುಟುಂಸ್ಥರಾದ ಶೋಭಾ ಮತ್ತು ಗಿರೀಶ್ ಕುಮಾರ್, ನಯನ ಮತ್ತು ಬಾಲಕೃಷ್ಣ, ಜಯಶ್ರೀ ಮತ್ತು ನೂತನ್, ವಿವೇಕ್ ಮತ್ತು ಪುಣ್ಯವಿವೇಕ್, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು. ಶಾಸಕ ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಸಂಜೀವ ಮಠಂದೂರು, ರಕ್ಷಿತ್ ಶಿವರಾಮ್, ನಾಗೇಶ್ ಗೌಡ, ಕಿರಣ್ ಪುಷ್ಪಗಿರಿ ನಿತ್ಯಾನಂದ ಮುಂಡೋಡಿ, ಸಿ.ಪಿ ಜಯರಾಂ ಮೊದಲಾದವರು ಉಪಸ್ಥಿತರಿದ್ದರು.

ಮನಿಷಾ ಮತ್ತು ಚೈತ್ರಾ ಪ್ರಾರ್ಥಿಸಿದರು. ವಾಣಿ ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪನ್ಯಾಸಕ ಬೆಳಿಯಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here