ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಗುರುವಾಯನಕೆರೆ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ, ಧೀಮಹಿ ಸನಾತನ ಪ್ರತಿಷ್ಠಾನ ಮಹಾವೀರ ನಗರ ವೇಣೂರು ಇದರ ಸಹಯೋಗದಲ್ಲಿ ವೇಣೂರು ವಲಯದ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ಉದ್ಘಾಟನೆಯನ್ನು ಗೌರಮ್ಮ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಜ್ಞ ನಾರಾಯನ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಭಾಸ್ಕರ್ ಪೈ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಅಶೋಕ್ ಬಿ.,
ಕುಣಿತ ಭಜನಾ ತರಬೇತಿ ಅಧ್ಯಕ್ಷ ಸಂದೇಶ್ ಮದ್ದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಧೀರ್ ಭಂಡಾರಿ, ಸಂಭಾಷಿನಿ, ಯೋಗೀಶ್, ಬಿಕ್ರೊಟ್ಟು, ರೋಹಿಣಿ ಪ್ರಕಾಶ್, ಪ್ರಶಾಂತ್ ಪಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತುದಾರರಾಗಿ ಗಗನ್ ಹಾಗು ಅಖಿಲೇಶ್ ಹಾಗೂ ಸೇವಾಪ್ರತಿನಿಧಿ ಜಯಂತಿ ವೇಣೂರು ಹಾಗೂ ಜಲಜ ಮೂಡುಕೋಡಿ ಸಂತೋಷ್ ಅಲಿಯೂರು ನೆರವೇರಿಸಿದರು.