ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಾವತಿಯಾಗಿದ್ದು, ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ನೊಂದ ಬಾಲಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಶಿರ್ಲಾಲು ಗ್ರಾಮದ ಸನತ್ (28ವ) ಎಂಬ ಯುವಕನ ಮೇಲೆ ಈ ದೂರನ್ನು ನೀಡಲಾಗಿದೆ.
ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ ಮನೆಗೆ ಬಂದವನು ಬಾಲಕಿ ಜೊತೆ ಸಲುಗೆಯಿಂದ ಇದ್ದನೆನ್ನಲಾಗಿದೆ. 2024 ಮೇ. 22ರಂದು ಬಾಲಕಿಯ ಜನ್ಮ ದಿನದ ಕಾರ್ಯಕ್ರಮಕ್ಕೆ ಬಂದು ಆರೋಪಿ ರಾತ್ರಿ ಉಳಕೊಂಡಿದ್ದು, ರಾತ್ರಿ ಮಲಗಿದ ಕೋಣೆಗೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ತದನಂತರದ ದಿನಗಳಲ್ಲಿ ಕೂಡಾ ಅಗಾಗ ರಾತ್ರಿ ಕಾಲದಲ್ಲಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಇದೀಗ ಆರೋಪಿ ಸನತ್ ವಿರುದ್ದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ವೇಣೂರು ಪೊಲೀಸ್ ಠಾಣಾ ಅ.ಕ್ರ: 41/2025 ಕಲಂ: 64 BNS-2023 : 4,6 ಪೋಕ್ಸೋ ಕಾಯಿದೆ 2012ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.