ಗೇರುಕಟ್ಟೆ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ನ ಖಂಡಿಗದಲ್ಲಿ ಹಿಂದೂ ರುದ್ರಭೂಮಿ “ಮೋಕ್ಷ ಧಾಮ” ಲೋಕಾರ್ಪಣೆಯ ಪೂರ್ವಭಾವಿ ಸಭೆಯು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ದಿವಾಕರ ಮೆದಿನ ವಹಿಸಿದ್ದರು.
ಸಮಿತಿಯ ಪ್ರಧಾನ ಸಂಚಾಲಕ ಕೇಶವ ಬಂಗೇರ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. 2025 ಮೇ. 21ರಂದು ಲೋಕಾರ್ಪಣೆ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು. ಹಾಗೂ ಸಭಾ ಕಾರ್ಯಕ್ರಮ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾದ್ಯಕ್ಷೆ ಇಂದಿರಾ ಬಿ., ಸಿ.ಎ.ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ಅಬ್ದುಲ್ ಕರೀಮ್ ಗೇರುಕಟ್ಟೆ, ಮೋಹಿನಿ, ಸುಭಾಷಿಣಿ, ಹರೀಶ್ ಕುಮಾರ್, ವಿಜಯ ಗೌಡ, ಯಶೋದರ ಶೆಟ್ಟಿ, ಶ್ವೇತಾ. ಕಾರ್ಯದರ್ಶಿ ಕುಂಙ.ಕೆ, ಸಮಿತಿಯ ಸದಸ್ಯರಾದ ಆರ್.ಎನ್.ಸುರೇಶ್ ಕುಮಾರ್, ಭುವನೇಶ್ ಜಿ., ರಾಘವ ಹೆಚ್, ತುಕರಾಮ ಪೂಜಾರಿ, ರಾಜೇಶ್ ಪೆಂರ್ಬುಡ. ಸಿ.ಎ.ಬ್ಯಾಂಕಿನ ಉಪಾದ್ಯಕ್ಷರಾದ ರಾಜ್ ಪ್ರಕಾಶ್, ಶೇಖರ್ ನಾಯ್ಕ, ಬಾಲಕೃಷ್ಣ ಬಿರ್ಮೊಟ್ಟು, ಕೇಶವ ಪೂಜಾರಿ, ಕುಶಾಲಪ್ಪ ಗೌಡ, ಸುಂದರ ನಾಯ್ಕ, ದಯಾರಾಜ್ ಕೆ.ಪಿ., ಕರುಣಾಕರ ಶೆಟ್ಟಿ, ನಾಣ್ಯಪ್ಪ ಗೌಡ, ಸತೀಶ್ ಪುಷ್ಪಕ್, ಪ್ರಕಾಶ್ ಮೇರ್ಲ, ಚಂದ್ರಮೋಹನ್ ಅಡೂರು, ಸೋಮಪ್ಪ ಗೌಡ, ವಸಂತ ಶೆಟ್ಟಿ, ಸತೀಶ್ ಶೆಟ್ಟಿ, ಸಂದೀಪ್ ನಾಳ, ಲೋಕೇಶ್ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ವಾಗತಿಸಿ, ಧನ್ಯವಾದವಿತ್ತರು.