ಮಚ್ಚಿನ: ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲೆಯಲ್ಲಿ ಅ. 11ರಂದು ಜ್ಞಾನ ವೈಭವ ಕಾರ್ಯಕ್ರಮವನ್ನು ತುಳಸಿದಾಸ್ ಪೈ ಉದ್ಯಮಿ ಅವರು ಉದ್ಘಾಟಿಸಿದರು. ಕಾರ್ಯಕ್ರಮ ಮಗುವಿನಲ್ಲಿ ಯಾವ ರೀತಿಯ ಜ್ಞಾನವಿದೆ ಎಂಬ ಪರಿಕಲ್ಪನೆಯನ್ನು ತಿಳಿಯಲು ಆಯೋಜಿಸಿದೆ. ಶಾಲೆಗಳಲ್ಲಿ ಇಂತ ಕಾರ್ಯಕ್ರಮಗಳನ್ನು ನಡೆಸಿದರೆ ಗ್ರಾಮೀಣ ಭಾಗದ ಮಕ್ಕಳು ಮುಂದಿನ ತಮ್ಮ ಬದುಕಿಗೆ ಹೇಗೆ ಸರಿದೂಗಿಸಿಕೊಳ್ಳಲು ಅನುವಾಗುತ್ತದೆ ಎಂಬ ಸಂದೇಶವನ್ನು ತಿಳಿಸುತ್ತಾ ನೆರೆದಂತ ಪೋಷಕರಿಗೆ ಈ ಕಾರ್ಯಕ್ರಮದ ಜೊತೆಯಲ್ಲಿ ನಾಡಿನ ಪರಿಸರ ಮತ್ತು ದೇಶಪ್ರೇಮವನ್ನು ಬೆಳೆಸಲು ಶಾಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಸ್.ವಿ ವರ್ಷಾ ಶೆಟ್ಟಿ, ಮುಖ್ಯ ಶಿಕ್ಷಕಿ ಶಭಿತಾ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಮತ್ತು ಪೋಷಕರು ಭಾಗವಹಿಸಿದ್ದರು. ಯತಿಕ್ಷ ತಂಡ ಪ್ರಾರ್ಥಿಸಿದರು. ಶ್ರವಣ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಾನ್ವಿತ ನಿರೂಪಿಸಿದರು. ಅಯ್ಯಪ್ಪ ವಂದಿಸಿದರು.