ಬೆಳ್ತಂಗಡಿ: ವಾಣಿ ಆಂ.ಮಾ. ಶಾಲೆಯಲ್ಲಿ ಮಕ್ಕಳಿಗೆ ಅತ್ಯಾಕರ್ಷಕ ಆಟದ ಮನೆ-ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾ‌ರ್ ರಿಂದ ಉದ್ಘಾಟನೆ

0

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆ, ಹಳೆಕೋಟೆಯಲ್ಲಿ ವಾಣಿ ಮಕ್ಕಳ ಆಟದ ಮನೆ ಉದ್ಘಾಟನಾ ಕಾರ್ಯಕ್ರಮವು ಅ. 16ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾ‌ರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ವಹಿಸಿದರು. ಗೌರವ ಅಧ್ಯಕ್ಷ ಹೆಚ್ ಪದ್ಮಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಕಳಿಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಬಾಲಕೃಷ್ಣಗೌಡ ಬಿರ್ಮೊಟ್ಟು, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಕೋಶಾಧಿಕಾರಿ ಯುವರಾಜ್ ಅನಾ‌ರ್, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಮಾಜಿ ಅಧ್ಯಕ್ಷ ಸೋಮೇಗೌಡ, ಆಡಳಿತಾಧಿಕಾರಿ ಪ್ರಸಾದ್‌, ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವಿಷ್ಣು ಪ್ರಕಾಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖ‌ರ್ ಶೆಟ್ಟಿ, ಉಪಾಧ್ಯಕ್ಷೆ ಚಿತ್ರಲೇಖ, ನಿರ್ದೇಶಕರಾದ ವಿಜಯ ಗೌಡ ನ್ಯಾಯತರ್ಪು, ದಿನೇಶ್ ಗೌಡ ಕೊಯ್ಯರು, ಮಾಧವ ಗೌಡ, ವಸಂತ ಗೌಡ, ಡಿ.ಎಂ. ಗೌಡ, ಉಷಾದೇವಿ ವೆಂಕಟ್ರಮಣ ಗೌಡ, ಭವಾನಿ ಕಾಂತಪ್ಪಗೌಡ ಉಪಸ್ಥಿತರಿದ್ದರು.

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಸ್ವಾಗತಿಸಿ, ಶಿಕ್ಷಕಿ ಮೋಹನಂಗಿ ಕಾರ್ಯಕ್ರಮ ನಿರೂಪಿಸಿ, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here