
ಮಡಂತ್ಯಾರ್: ಎಸ್. ಎಸ್. ಎಲ್. ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಮಡಂತ್ಯಾರ್ ನಲ್ಲಿ ಒಟ್ಟು 131 ವಿದ್ಯಾರ್ಥಿಗಳು ಹಾಜರಾಗಿದ್ದು, 97ವಿದ್ಯಾರ್ಥಿಗಳು ತೇರ್ಗಡೆಯಾಗಿ 74. 04% ಫಲಿತಾಂಶ ಗಳಿಸಿದೆ. 12 ಮಂದಿ ಉನ್ನತ ಶ್ರೇಣಿ, 49ಮಂದಿ ಪ್ರಥಮ ಸ್ಥಾನ, 32ಮಂದಿ ದ್ವಿತೀಯ ಸ್ಥಾನ, 4ಮಂದಿ ತೃತೀಯ ಸ್ಥಾನ ಗಳಿಸಿದ್ದಾರೆ. ಕಿಶೋರ್ 601, ಶುಬಹನ್ 570, ಸುಚಿತ್ರ 579, ಸೌದ ಮರಿಯಾಮ್ 552, ರಕ್ಷಾ 552 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.