
ಉಜಿರೆ: ಇಲ್ಲಿಯ ಓಡಲ ಚಾಮುಂಡಿ ನಗರ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಿ. ರಾಜಗೋಪಾಲ ಯಡಪಡಿತ್ತಾಯರ ನೇತೃತ್ವದಲ್ಲಿ ಎ.29ರಂದು ಪ್ರತಿಷ್ಠಾ ವಧಂತ್ಯುತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಟೆ, ಗಣಪತಿ ಹೋಮ, ಕಲಶಾಭಿಷೇಕ, ಚಾಮುಂಡಿ ನಗರ ಶಿವ ಪಾರ್ವತಿ ಭಜನಾ ಮಂಡಳಿ ಮತ್ತು ಮಾಚಾರು ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯಿಂದ ಭಜನೆ, ಮದ್ಯಾಹ್ನ ಪರ್ವ, ಮಹಾ ಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಮಹಾಪೂಜೆ, ರಾತ್ರಿ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ, ಚಂದ್ಕುರು ಧರಿತ್ರಿ ಕಲಾವಿದರಿಂದ ಮಹಿಷ ಮರ್ದಿನಿ ರೂಪಕ, ನಂತರ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ ಎಂದು ವ್ಯಾಘ್ರಚಾಮುಂಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.