
ಶಿರ್ಲಾಲು: ಎ. 20ರಂದು ನಡೆದ ಜೈ ಭೀಮ್ ಯುವ ಸೇನೆ ಕರಂಬಾರು ಶಿರ್ಲಾಲು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಮತ್ತು ದಲಿತ ಬಾಂಧವರಿಗೆ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕರಂಬಾರು ಅಧ್ಯಕ್ಷ ಪುಷ್ಪರಾಜ್ ಎಂ. ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಬೆಳ್ತಂಗಡಿ ಮಾಜಿ ಸದಸ್ಯ ಪ್ರಶಾಂತ್ ವೇಗಸ್, ಗ್ರಾಮ ಪಂಚಾಯತ್ ಅಳದಂಗಡಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ದ.ಕ. ಜಿಲ್ಲಾ ಯುವ ಜನ ಒಕ್ಕೂಟ ಮಂಗಳೂರು ಗೌರವಾಧ್ಯಕ್ಷ ರಾಜೀವ್ ಸಾಲಿಯಾನ್, ಹಾಲು ಉತ್ಪಾದಕರ ಸಹಕಾರ ಸಂಘ ಶಿರ್ಲಾಲು ಅಧ್ಯಕ್ಷ ಮಾಧವ, ಉದ್ಯಮಿ ಬೆಂಗಳೂರು ಶ್ರೀಧರ ಶಾಂತಿನಗರ ಸಣ್ಣಪ್ಪು ಹೊಸಮನೆ ಶಿರ್ಲಾಲು, ಕರಂಬಾರು ಶಾಲೆ ಶಿಕ್ಷಕ ಸದಾಶಿವ ಕುಮಾರ್, ಸಂತೋಷ್ ಹೆಗ್ಡೆ ಪರ್ಲಂಡ, ಶ್ರೀ ಸತ್ಯ ಸಾರ ಮುಪ್ಪಣ್ಯ ದೈವಸ್ಥಾನದ ಜಾತ್ರಾ ಸಮಿತಿ ಅಧ್ಯಕ್ಷ ಅಂಗರ ಮೇಸ್ತ್ರಿ ಪೆರ್ನು ಸುವರ್ಣ, ಈ ಕಾರ್ಯಕ್ರಮವನ್ನು ಜ್ಯೋತಿ ಸುಂದರ್ ಸ್ವಾಗತಿಸಿದರು. ಬಹುಮಾನಗಳ ಪಟ್ಟಿಯನ್ನು ಶ್ವೇತ ಓದಿದರು. ಬಾಬು ಎ. ಕಾರ್ಯಕ್ರಮವನ್ನು ನಿರೂಪಿಸಿ, ಅಣ್ಣು ಎಸ್. ಪುಚ್ಚೆದೊಟ್ಟು ಧನ್ಯವಾದಗಳು ಸಲ್ಲಿಸಿದರು.