ಇತಿಹಾಸ ಪ್ರಸಿದ್ಧ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರಾ ಮಹೋತ್ಸವಕ್ಕೆ ಚಾಲನೆ

0

ಮಚ್ಚಿನ: ಇತಿಹಾಸ ಪ್ರಸಿದ್ಧ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ ಮತ್ತು ವಾರ್ಷಿಕ ಮೇಷ ಜಾತ್ರಾ ಮಹೋತ್ಸವವು ಏ. 23ದಿಂದ ಮೇ.2ರವರೆಗೆ ಜರಗಲಿದೆ.

ಏ.23ರಂದು ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 6.30ರಿಂದ ಧ್ವಜಾರೋಹಣ, ಮಹಾಪೂಜೆ, ಉತ್ಸವ, ವಸಂತ ಸೇವೆ ನಡೆಯಿತು. ಏ. 24 ಮಹಾಪೂಜೆ, ಏಕಾದಶಿ, ರಾತ್ರಿ ಗಂಟೆ 7ರಿಂದ ಮಹಾಪೂಜೆ, ಉತ್ಸವ ಏ. 25ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, ಸಂಜೆ ಗಂಟೆ 6.30ರಿಂದ ಮಹಾಪೂಜೆ, ಉತ್ಸವ, ಏ. 26ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 6ರಿಂದ ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ವಸಂತ ಸೇವೆ, ಏ.27ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7ರಿಂದ ಕೆರೆ ಆಯನ, ಉತ್ಸವ, ಮಹಾಪೂಜೆ. ಏ.28ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಉತ್ಸವ, ಮೂಡುಕಟ್ಟೆ ಸವಾರಿ, ವಸಂತ ಸೇವೆ, ಮಹಾಪೂಜೆ.

ಏ. 29ರಂದು ಬ್ರಹ್ಮಕಲಶ ದಿನಾಚರಣೆ: ಏ. 29ರಂದು ಪೂರ್ವಾಹ್ನ ಗಂಟೆ 7ರಿಂದ ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾರುದ್ರಾಬಿಷೇಕ, ಪವಮಾನಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 7ರಿಂದ ಚಂದ್ರಮಂಡಲೋತ್ಸವ ವಸಂತ ಸೇವೆ, ಮಹಾಪೂಜೆ.

ಏ. 30ರಂದು ಮಹಾರಥೋತ್ಸವ: ಏ. 30ರಂದು ಪೂರ್ವಾಹ್ನ ಗಂಟೆ 7ರಿಂದ ದರ್ಶನ ಬಲಿ ಸಾಯಂ. ಗಂಟೆ 6ರಿಂದ ಮಹಾರಥೋತ್ಸವ, ಮಹಾಪೂಜೆ, ಶ್ರೀಭೂತ ಬಲಿ, ಮೇ 1ಪ್ರಾತಃಕಾಲ ಕವಾಟೋದ್ಘಾಟನೆ, ವಸಂತ ಸೇವೆ ಮಧ್ಯಾಹ್ನ 11ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಅವಭ್ರತ ರಾತ್ರಿ 8ರಿಂದ ಧ್ವಜಾವರೋಹಣ, ಮಹಾಪೂಜೆ. ಮೇ. 2ರಂದು ಮಹಾಸಂಪ್ರೋಕ್ಷಣೆ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here