
ಉಪ್ಪಾರಪಳಿಕೆ: ಶ್ರೀ ಕೃಷ್ಣ ಭಜನಾ ಮಂದಿರ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹೆಗ್ಗಡೆಯವರು ಮಂಜೂರು ಮಾಡಿದ ರೂ.1,00,000 ದ ಮಂಜೂರಾತಿ ಪತ್ರವನ್ನು ಬೆಳ್ತಂಗಡಿ ಯೋಜನಾಧಿಕಾರಿ ಯಶೋಧರ ವಿತರಿಸಿದರು.
ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ, ಒಕ್ಕೂಟ ಪದಾಧಿಕಾರಿಗಳು ನವೀನ್, ರಮೇಶ್, ಹರಿಶ್ಚಂದ್ರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್, ಕೊಕ್ಕಡ ವಲಯ ಮೇಲ್ವಿಚಾರಕ ಭಾಗೀರಥಿ, ಸೇವಾಪ್ರತಿನಿಧಿ ರೋಹಿಣಿ, ಮಂದಿರದ ಅಧ್ಯಕ್ಷ ಶ್ರೀನಾಥ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.