

ಧರ್ಮಸ್ಥಳ: ದಾವಣಗೆರೆಯ ಪ್ರತಿಷ್ಠಿತ ಜಿ.ಎಂ. ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆಯೋಜನೆ ಮಾಡಿದ್ದ ವಿವಿಧ ರಾಜ್ಯ ಮಟ್ಟದ ತಾಂತ್ರಿಕ ಸ್ಪರ್ಧೆಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು 9 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ತಾಂತ್ರಿಕ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಗಳಲ್ಲಿ ಎಸ್. ಡಿ. ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ರೆಹನ್, ಮಧುಕರ, ಸಂದೇಶ್, ಶ್ರವಣ್ ಕುಮಾರ್, ಹರ್ಷಕುಮಾರ್ ಪ್ರಾಜೆಕ್ಟ್ ಎಕ್ಸ್ಪೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್, ಪ್ರಶಾಂತ್ ಮತ್ತು ಪ್ರಜ್ವಲ್ ಗೌಡ ಟೆಕ್ನಿಕಲ್ ಪೇಪರ್ ಪ್ರೆಸೆಂಟೇಷನ್ ನಲ್ಲಿ ಪ್ರಥಮ ಬಹುಮಾನವನ್ನು ಮತ್ತು ಚಿರಂಜೀವಿ ಚಿನ್ಮಯಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ. ಅದೇ ವಿಭಾಗದ ರವಿಶಂಕರ್ ಪಾಟೀಲ್ ಮತ್ತು ಅಭಿಷೇಕ್ ಪ್ರಶಾಂತ್ ತಾಂತ್ರಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಿವಿಲ್ ವಿಭಾಗದ ಶ್ರವಣ್ ಕುಮಾರ್ ಟೆಕ್ನಿಕಲ್ ಪೇಪರ್ ಪ್ರೆಸೆಂಟೇಷನ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ರೆಹನ್ ತಾಂತ್ರಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಟೆಕ್ ಸ್ಕಿಲ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರೆಲ್ಲರಿಗೂ ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.