

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಈದ್ ಆಚರಣೆ ನಡೆಯಿತು. ಈದ್ ನಮಾಝ್ ಮತ್ತು ಸಾಮೂಹಿಕ ದರ್ಗಾ ಝಿಯಾರತ್ ನೇತೃತ್ವವನ್ನು ಖತೀಬ ಎಫ್. ಹೆಚ್. ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ವಹಿಸಿದ್ದರು. ಜಮಾಅತರನ್ನು ಉದ್ದೇಶಿಸಿ ಶಾಂತಿಯ ಸಂದೇಶ ನೀಡಿದರು.


ಕಳೆದ 2 ವರ್ಷಗಳಿಂದ ಮುಅದ್ದಿನ್ ರಾಗಿ ಸೇವೆ ಸಲ್ಲಿಸಿದ ಅಬ್ಬಾಸ್ ಹಿಶಮಿ ರವರನ್ನು ಬಿಳ್ಕೊಡಲಾಯಿತು. ಹಾಗೂ ಹೆಚ್ಚಿನ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಈಜಿಪ್ಟ್ ದೇಶಕ್ಕೆ ತೆರಳುತ್ತಿರುವ ಜುನೈದ್ ಸುಣ್ಣಲಡ್ಡರವರನ್ನು ಗೌರವಿಸಲಾಯಿತು. ಆಡಳಿತ ಸಮಿತಿ, ಸ್ವಲಾತ್ ಸಮಿತಿ, ಕೆ. ಎಮ್. ಜೆ., ಎಸ್. ವೈ. ಎಸ್., ಎಸ್.ಎಸ್.ಎಫ್ ಹಾಗೂ ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.